ದಿನದ ಸುದ್ದಿ

ಕೇವಲ ಸಿನೆಮಾದವರಷ್ಟೇ ಬೌದ್ಧಿಕ ದುರ್ಬಲರಲ್ಲ, ಆ ವಿಭಾಗದಲ್ಲಿ ಕ್ರಿಕೆಟಿಗರೂ ಮುನ್ನಡೆ ಸಾಧಿಸಿದ್ದಾರೆ : ನಟ ಚೇತನ್ ಕಿಡಿ

Published

on

ಸುದ್ದಿದಿನ ಡೆಸ್ಕ್ : ದೆಹಲಿಯಲ್ಲಿ ರೈತರು ಕೇಂದ್ರ ಸರ್ಕಾರದ ರೈತ ವಿರೋಧಿ ಮಸೂದೆಗಳನ್ನು ವಿರೋಧಿಸಿ ಸತತ ಮೂರು ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಬಿಜೆಪಿ ರೈತ ಹೋರಾಟವನ್ನು ಹತ್ತಿಕ್ಕಲು ಹಲವು ವಾಮಮಾರ್ಗಗಳನ್ನುಸರಿಸುತ್ತಿದೆ.

ಈ ವಿಷಯದ ಕುರಿತಾಗಿ ಪಾಪ್ ಗಾಯಕಿ ರಿಹಾನ,ಗ್ರೇಟಾ ಥನ್‌ಬರ್ಗ್‌ ಎಂಬ ಪರಿಸರ ಹೋರಾಟಗಾರ್ತಿಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ ಅವರ ಸೊಸೆ (ಅಡ್ವೊಕೇಟ್‌) ಮೀನಾ ಹ್ಯಾರಿಸ್‌, ಬಾಲಿವುಡ್ ನಟಿ ತಾಪ್ಸಿ ಕೇಂದ್ರ ಸರ್ಕಾರದ ಸರ್ವಾಧಿಕಾರಿ ಧೋರಣೆ ವಿರೋಧಿಸಿ ಟ್ವೀಟ್ ಮಾಡುವುದರ ಮೂಲಕ ಪ್ರತಿಕ್ರಿಯಿಸಿದ್ದರು.

ಅವರ ಒಂದೇ ಒಂದು ಟ್ವೀಟ್ ನಿಂದ ದೇಶದ ಯಾವುದೇ ಸಮಸ್ಯೆಗಳ ಸಮಯದಲ್ಲಿ ಬಾಯಿ ಮುಚ್ಚಿಕೊಂಡಿದ್ದ ಕ್ರಿಕೆಟ್ ನ ದೇವರುಗಳು ಎಂದು ಕರೆಸಿಕೊಂಡಿದ್ದವರು ದೇಶದ ಐಕ್ಯತೆ ಬಗ್ಗೆ ಊಳಿಡಲು ಆರಂಭಿಸಿದರು. ಸಚಿನ್ ತೆಂಡೂಲ್ಕರ್, ಕುಂಬ್ಳೆ, ವಿರಾಟ್ ಕೊಹ್ಲಿ ಇನ್ನಿತರರು.

ಕ್ರಿಕೆಟಿಗರ ಈ ಟ್ವೀಟ್ ಗೆ ಭಾರೀ ವಿರೋಧವೂ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಅಸಲಿ ಹೋರಾಟಗಾರರಿಂದ ದೇಶಭಕ್ತಿಯ ಪಾಠವನ್ನೂ ಹೇಳಿಸಿಕೊಳ್ಳುತ್ತಿದ್ದಾರೆ‌.

ಇವರ ಈ ನಡೆಯ ಕುರಿತಾಗಿ ಕನ್ನಡದ, ಸಮ ಸಮಾಜದ ಕನಸುಗಾರ,ನಟ, ಹೋರಾಟಗಾರ ಚೇತನ್, ಕೇವಲ ಸಿನೆಮಾ ದವರನ್ನು ಬೌದ್ಧಿಕ ದುರ್ಬಲರು ಅಲ್ಲ ಕೆಲವು ಕ್ರಿಕೆಟಿಗರೂ ಕೂಡ ಎಂದು ಟ್ವೀಟ್ ಮಾಡಿದ್ದಾರೆ.


ಟ್ವೀಟ್

ಭಾರತೀಯ ಚಲನಚಿತ್ರ ನಟರು ಇನ್ನು ಮುಂದೆ ದೇಶದ ಅತ್ಯಂತ ಸ್ವಾರ್ಥಿ, ಬೌದ್ಧಿಕವಾಗಿ ದುರ್ಬಲರು, ಹೇಡಿತನದ ಪ್ರಸಿದ್ಧರು ಅಲ್ಲ …. ಈಗ ಭಾರತೀಯ ಕ್ರಿಕೆಟ್ ಆಟಗಾರರು ಆ ವಿಭಾಗಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. ನಮಗೆಲ್ಲರಿಗೂ ತಿಳಿದಿರುವಂತೆ, ‘ಚೆಂಡು’ಗಳೊಂದಿಗೆ ಆಡಲು ಹೆಚ್ಚು ಮಿದುಳು ಅಥವಾ ಹೃದಯವನ್ನು ತೆಗೆದುಕೊಳ್ಳುವುದಿಲ್ಲ.”

| ನಟ ಚೇತನ್


ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version