ದಿನದ ಸುದ್ದಿ

ನವಿಲೇಹಾಳಿನಲ್ಲಿ ‘ಅದ್ದೂರಿ ಕನ್ನಡ ರಾಜ್ಯೋತ್ಸವ ಆಚರಣೆ’

Published

on

ಸುದ್ದಿದಿನ,ದಾವಣಗೆರೆ : 63ನೇ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಗ್ರಾಮ‌ ಪಂಚಾಯಿತಿ ನವಿಲೇಹಾಳು ಇವರ ಸಂಯುಕ್ತ ಆಶ್ರಯದಲ್ಲಿ ಇಂದು ಗ್ರಾಮದಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಕನ್ನಡ ದ್ವಜ ಸ್ತಂಭದ ದ್ವಜಾರೋಹಣವನ್ನು ನವಿಲೇಹಾಳಿನ ಗ್ರಾಮದವರಾದ ಪ್ರದೀಪ್ ಟಿ.ಆರ್ , ಪಿ.ಎಸ್.ಐ, ಮಂಗಳೂರು,ಹಾಗೂ ಭುವನೇಶ್ವರಿಯ ಮೆರವಣಿಗೆಯ ಚಾಲನೆಯನ್ನು ಅನ್ವರ್ ಖಾನ್,ಪಿ.ಎಸ್.ಐ,ಅಲಸೂರು ಪೊಲೀಸ್ ಸ್ಟೇಶನ್ ಬೆಂಗಳೂರು ಸಿಟಿ, ಇವರು ನೆರೆವೇರಿಸಿದರು.

ಸಮಾರಂಭವನ್ನು ಗ್ರಾಮದ ಡಾ.ಹೆಚ್.ಚಿನ್ನಪ್ಪ, ಸಹ ಪ್ರಾಧ್ಯಾಪಕರು, ಕನ್ನಡ ವಿಭಾಗ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ಶಿವಮೊಗ್ಗ ಇವರು ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ರಾಜ್ಯೋತ್ಸವವು ಕೇವಲ ಆಚರಣೆಯಾಗದೇ ನಮ್ಮ ದಿನನಿತ್ಯದ ಬದುಕಲ್ಲಿ ಕನ್ನಡವನ್ನು ಬಳಕೆಮಾಡುವುದರ ಮಾಡುವುದರ ಕನ್ನಡ ಅಸ್ತಿತ್ವ ಉಳಿಯಲು ಸಾಧ್ಯವಾಗುತ್ತದೆ. ಇದುವರೆಗೂ ಕನ್ನಡ ರಾಜ್ಯೋತ್ಸವದ ಸಾಧನೆ ಏನೂ ಇಲ್ಲ. ಆದರೆ ಈ ಆಚರಣೆಯ ಆಚೆಗೆ ಮೀರಬೇಕಿದ್ದು,ಇದು ನವೆಂಬರ್ ತಿಂಗಳಿಗೆ ಮಾತ್ರ ಸೀಮಿತವಾಗಬಾರದು. ಇದರಿಂದ ಕನ್ನಡದ ದುಸ್ಥಿತಿ ನಿರ್ಮಾಣವಾಗಿದೆ ಎಂದು ವಿಶಾದ ವ್ಯಕ್ತಪಡಿಸಿದರು.

ನಂತರ ಮಾತನಾಡಿದ ಅವರು ಜನಸಂಖ್ಯೆ ಹೆಚ್ಚಾದಂತೆ, ಕನ್ನಡದ ದುಸ್ಥಿತಿಯೂ ಹೆಚ್ಚಾಗಿದೆ.
ಕನ್ನಡ ಮಾದ್ಯಮದಲ್ಲಿಯೇ ಪ್ರಾಥಮಿಕ ಶಿಕ್ಷಣವು ಆಗಬೇಕಿದೆ. ಅದು ಸಂವಿಧಾನ ತಿದ್ದುಪಡಿಯ ಮೂಲಕ ಆಗಬೇಕಿದೆ. ಕರ್ನಾಟಕ ಸರ್ಕಾರ ಕೇಂದ್ರಕ್ಕೆ ಈ ಮನಿವಿಯನ್ನು ಸಲ್ಲಿಸಿತ್ತು ಆದರೆ ಕೇಂದ್ರ ಅದರ ಬಗ್ಗೆ ನಿರ್ಲಕ್ಷ ವಹಿಸಿದೆ. ಹಾಗೇ ಕರ್ನಾಟಕ ಸರ್ಕಾರವೂ ಕೂಡ ಈ ವಿಷಯವನ್ನು ಅಷ್ಟು ಗಂಭೀರವಾಗಿ ಪರಿಗಣಿಸದೆ ಇರುವುದರಿಂದ ಕನ್ನಡ ಶಾಲೆಗಳು ನೇಪತ್ಯಕ್ಕೆ ಸರಿದಿವೆ ಎಂದರು.

ಮಕ್ಕಳ‌ ಪೋಷಕರುಗಳು ಕಾನ್ವೆಂಟ್ ಹಾಗೂ ಈ ಇಂಗ್ಲಿಷ್ ಭ್ರಮೆ‌ಯಿಂದ ಹೊರಬರ ಬೇಕಾಗಿದೆ. ಕನ್ನಡಕ್ಕೆ ಮಕ್ಕಳ ಬೌದ್ದಿಕತೆಯನ್ನು ಬೆಳೆಸುವ ಶಕ್ತಿಇದ್ದು, ಇದು ನಮ್ಮ ಬದುಕಿನ ಉಳಿವಿಗೆ ಸಹಕರಿಸಲಿದೆ ಎಂದರು. ಹಾಗೇ ಮುಂದುವರಿದು ಮಾತನಾಡಿದ ಅವರು ಜಾನಪದ ಹಾಡುಗಾರ್ತಿ ಸಿರಿಯಜ್ಜಿ ಸೇರಿದಂತೆ ಹಲವು ಜನಪದರ ಕನ್ನಡ ಸಾಧನೆಯನ್ನ ಮೆಲುಕು ಹಾಕಿದರು.

ನಂತರ ಶಾಲಾ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಕನ್ನಡ ರಾಜ್ಯೋತ್ಸವದ ಮೆರುಗನ್ನು ಇಮ್ಮಡಿಗೊಳಿಸಿದರು.

ಶಾಲಾ ಮಕ್ಕಳು ಪ್ರಾರ್ಥನೆಯ ಮೂಲಕ ಸಮಾರಂಭಕ್ಕೆ ಚಾಲನೆ ನೀಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿ.ಮಹೇಶ್ವರಪ್ಪ ಅವರುವಹಿಸಿದ್ದರು. ಮುಖ್ಯ ಅಥಿತಿಗಳಾಗಿ ಸಾಕಮ್ಮ ಗಂಗಾಧರ ನಾಯ್ಕ, ಜಿ.ಪಂ, ಸದಸ್ಯರು, ಕೋಗಲೂರು ಕ್ಷೇತ್ರ, ಕವಿತಾ ಕಲ್ಲೇಶ್,ತಾ.ಪಂ ಸದಸ್ಯರು ನಲ್ಕುದುರೆ ಕ್ಷೇತ್ರ, ಶ್ರೀನಿವಾಸ್ ಕೃಷಿ ಅಧಿಕಾರಿ ರೈತ ಸಂಪರ್ಕ ಕೇಂದ್ರ, ತ್ಯಾವಣಿಗಿ, ಪ್ರಸನ್ನ ಕುಮಾರ್, ಪ್ರಭಾರ ಉಪ ತಹಶೀಲ್ದಾರ್,ನಾಡ ಕಛೇರಿ, ತ್ಯಾವಣಿಗೆ, ಎನ್.ಬಾಬು, ಪಿ.ಡಿ.ಒ, ನವಿಲೇಹಾಳು, ರಾಘವೇದ್ರ ನಾಯ್ಕ, ಕಾರ್ಯದರ್ಶಿ ಗ್ರಾ.ಪಂ, ಕಡ್ಲೆಬಾಳು ಇವರು ಭಾಗವಹಿಸಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version