ದಿನದ ಸುದ್ದಿ
ಕೊಡಗು ಸಂತ್ರಸ್ತರಿಗೆ ನೆರವು | ಉಡಿಯೊಡ್ಡಿ ದೇಣಿಗೆ ಸಂಗ್ರಹಿಸಿದ ಕನ್ನಡ ವಿ.ವಿ ಕುಲಪತಿ ಮಲ್ಲಿಕಾ ಎಸ್ ಘಂಟಿ
ಸುದ್ದಿದಿನ ಡೆಸ್ಕ್ | ಜ್ಞಾನದ ದೇಗುಲ, ಬಡವರ ದೇವಸ್ಥಾನ ಎಂದು ಕರೆಸಿಕೊಳ್ಳುವ ಕನ್ನಡ ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಾದ ಮಲ್ಲಿಕಾ ಎಸ್ ಘಂಟಿಯವರು ಕೊಡಗು ಸಂತ್ರಸ್ಥ ಜನತೆಗಾಗಿ ದೇಣಿಗೆಯನ್ನು 3 ಕಿ.ಮೀ ಕಾಲು ನಡಗೆಯಲ್ಲಿ ತಮ್ಮ ಉಡಿಯೊಡ್ಡುವ ಮೂಲಕ ಹಣವನ್ನು ಸಂಗ್ರಹಿಸಿದರು.
ವಿವಿಯ ಕುಲಪತಿ ಸೇರಿದಂತೆ ಉಪನ್ಯಾಸರು ಮತ್ತು ಸಿಬ್ಬಂದಿವರ್ಗದವರು ವಿದ್ಯಾರ್ಥಿಗಳು ಸೇರಿ ಸಂತ್ರಸ್ತರ ನೆರವಿಗಾಗಿ ಇಂದು ಧನ ಸಂಗ್ರಹಕ್ಕೆ ಹೊಸಪೇಟೆಯಲ್ಲಿ ಜಾಥಾ ನಡೆಸಲಾಯಿತು. ವಿವಿ ಕುಲಪತಿಗಳಾದ ಮಲ್ಲಿಕಾ ಎಸ್ ಘಂಟಿಯವರು ತಮ್ಮ ಸೆರಗೊಡ್ಡಿ ನಿಧಿ ಸಂಗ್ರಹ ಮಾಡಿರುವುದರೊಂದಿಗೆ ಕನ್ನಡ ವಿವಿ ಪ್ರಾಧ್ಯಾಪಕರು ಸೇರಿ ಸಿಬ್ಬಂದಿ ವರ್ಗದವರಿಂದ ಕೊಡಗು ಪರಿಹಾರ ನಿಧಿಗೆ ಒಂದು ದಿನದ ವೇತನದೊಂದಿಗೆ ಒಟ್ಟು 10 ಲಕ್ಷ ರೂ. ದೇಣಿಗೆ ಸಂಗ್ರಹಿಸಲಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401