ದಿನದ ಸುದ್ದಿ
ಕರ್ನಾಟಕ ಅಚೀವರ್ಸ್ ಬುಕ್ ಆಫ್ ರೆಕಾರ್ಡ್ ನಲ್ಲಿ ಪುಟ್ಟ ಪೋರ ತಾನೀಶ್.ಎನ್ ಬರೆದ ಅದ್ಭುತ ದಾಖಲೆ..!
- ಸಂಗಮೇಶ ಎನ್ ಜವಾದಿ, ಬೀದರ ಜಿಲ್ಲೆ
ಬಸವಾದಿ ಪ್ರಮಥರ ವಾಣಿಯ
ಆಶಯದಂತೆ ಹುಟ್ಟುವ ಪ್ರತಿ ಮಗುವು ಶ್ರೇಷ್ಠನಾಗಿಯೇ ಹುಟ್ಟುತ್ತಾನೆ. ನಂತರ ಆ ಮಗುವನ್ನು ಜಾತಿ-ಮತದ ಕಟ್ಟುಪಾಡುಗಳಿಂದ ನಾವೆಲ್ಲರೂ ಇಂದು ಬಂಧಿಸುತ್ತಿದ್ದೇವೆ. ಯಾವುದೇ ಒಬ್ಬ ವ್ಯಕ್ತಿಯನ್ನು ಜಾತಿಯಿಂದ ಅವರ ಮೌಲ್ಯಗಳನ್ನು ಖಂಡಿತಾ ಅಳೆಯಬಾರದು.
ಹಾಗಾದಾಗ ಮಾತ್ರ ನೈತಿಕ ವ್ಯಕ್ತಿತ್ವದ ಮೌಲ್ಯಗಳಿಗೆ ಸಮಾಜದಲ್ಲಿ ಬೆಲೆ ಬರುತ್ತದೆ ಎನ್ನುವುದು ನಾವೆಲ್ಲರೂ ಮನಗಾಣುವುದು ಒಳ್ಳೆಯದು ಎನ್ನುವ ಭಾವನೆ ಇಲ್ಲಿ ವ್ಯಕ್ತಪಡಿಸುತ್ತಾ,ಈ ಹಾದಿಯಲ್ಲಿಯೇ ಅಂದರೆ ಸನ್ಮಾರ್ಗದ ಸಾಧನಾ ಸೇವೆಯಲ್ಲಿ ಸಾಗುತ್ತಿರುವ ಕರ್ನಾಟಕ ರಾಜ್ಯದ ಅತಿ ಕಿರಿಯ ವಯಸ್ಸಿನಲ್ಲಿಯೇ ಅಂದರೆ ಅವನ ಎರಡುವರೆ ವರ್ಷಕ್ಕೆ, ಕರ್ನಾಟಕ ಸಾಧಕರ ಸಾಲಿನಲ್ಲಿ ವಿಶೇಷ ಸಾಧನೆ ಮಾಡುವ ಮೂಲಕ Karnataka achievers book of Record ನಲ್ಲಿ ಈ ಪುಟ್ಟ ಪೋರ ತಾನೀಶ್.ಎನ್ ಸ್ಥಾನ
ಪಡೆದು ನಾಡಿನ ಜನರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ.
ತಾನೀಶ್ ಎನ್. ಈ ಹೆಸರೇ ಸೂಚಿಸುವ ಹಾಗೇ ತಾನೀಶ್ ಎಂದರೆ ವಜ್ರದ ಪ್ರತಿರೂಪದ ಛಾಯೆ ಎಂದರ್ಥ. ಇವನ ವ್ಯಕ್ತಿತ್ವ ಸಹ ವಜ್ರದ ಹಾಗೆಯೇ ಹೊಳೆಯುವ ಬೆಳಕಿನ ಕಿರಣಗಳು ಹಾಗೆ ಇದೆ ಎನ್ನಬಹುದಾಗಿದೆ. ಈ ಎಲ್ಲಾ ಕಾರಣಗಳಿಂದ ಇಂದು ನಮ್ಮ ಕರುನಾಡಿಗೆ ಕೀರ್ತಿಯನ್ನು ತಂದಿದ್ದಾನೆ.
ಇದು ನಮ್ಮಗೆಲ್ಲರಿಗೂ ಅತ್ಯಂತ ಸಂತೋಷ ಪಡುವ ವಿಚಾರವಾಗಿದೆ ಸ್ನೇಹಿತರೆ.ಆದ್ದರಿಂದ ಈ ಪುಟ್ಟ ಪೋರ ತಾನೀಶ್.ಎನ್ ರವರು ಮಾಡಿರುವ ಸಾಧನೆ ಅದ್ಭುತ ಮತ್ತು ಅನುಪಮ.ಈ ಹಿನ್ನೆಲೆಯಲ್ಲಿ ಅವನು ಮಾಡಿರುವ ಸಾಧನೆ ತಮ್ಮ ಮುಂದೆ ಹಂಚಿಕೊಳ್ಳುತ್ತೀರುವೆ.
ಈ ಪುಟ್ಟ ಪೋರ ಹುಟ್ಟಿದ್ದು ಕರ್ನಾಟಕ ರಾಜ್ಯದ
ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಲಕ್ಕೂರು ಗ್ರಾಮದ ಎಂ.ನಾಗರಾಜ್ ಮತ್ತು ಶ್ವೇತಾಂಜಲಿ ದಂಪತಿಗಳ ಮಗನಾಗಿ 24-06-2017 ರಂದು ಜನಿಸಿದಾರೆ.ಇತನ ಗ್ರಹಿಕೆ ಶಕ್ತಿಯು ಅತಿ ಚುರುಕಾಗಿದೆ.ಇದನ್ನು ಗಮನಿಸಿದ ತಾಯಿ ಶ್ವೇತ ನಾಗರಾಜ್ ರವರು ಹೆಚ್ಚು ಆಸಕ್ತಿ ವಹಿಸಿ ಇತನ ಓದು, ಬರಹದ ಜೊತೆಗೆ ಭರತನಾಟ್ಯ ನೃತ್ಯ ಸಹ ಕಲಿಸುತ್ತಿದ್ದಾರೆ.
ಹಾಗಾಗಿ ಮಗುವು ಆಸಕ್ತಿಯಿಂದ ಕಲಿಯುತ್ತಿರುವುದು ಹಾಗೂ ಕಲಿತು ಇನ್ನೊಬ್ಬರಿಗೆ ಮಾರ್ಗದರ್ಶನ ಮಾಡುತ್ತಿರುವುದು ಅತ್ಯಂತ ಹೆಮ್ಮೆಯ ತರುವ ಸಂಗತಿಯಾಗಿದೆ ಎನ್ನಬಹುದು. ಹೀಗಾಗಿ ಇವನ ಕಲಿಕೆಯ ಬುದ್ಧಿವಂತಿಕೆಗೆ ಕೋಲಾರ ಜಿಲ್ಲೆಯ ಜನ ಸೂಪರ್ ಮೆಮೊರಿ ಕಿಡ್ ಬಾಲಕ ಎಂದು ಪ್ರೀತಿ ಅಭಿಮಾನದಿಂದ ಕರೆಯುತ್ತಾರೆ.
ಈ ಎಲ್ಲಾ ಬಾಲಕನ ಬೆಳವಣಿಗೆಗೆ ಅವನ ತಾಯಿಯೇ ಮಾರ್ಗದರ್ಶಕರು ಮತ್ತು ಕಾರಣಿಕರ್ತರು ಎನ್ನಬಹುದಾಗಿದೆ. ತಾಯಿ ಶ್ವೇತಾಂಜಲಿ ಭರತನಾಟ್ಯ ಶಾಲೆ (ರಿ.) ಹಾಗೂ ವಿಶ್ವಮಾನವ ಕುವೆಂಪು ಫೌಂಡೇಶನ್ (ರಿ.) VKF ಸಂಸ್ಥಾಪಕರು ಆಗಿರುವ ಕಾರಣದಿಂದ ಅನೇಕ ಸಮಾಜ ಮುಖಿ ಸೇವೆಗಳು ದಿನನಿತ್ಯ ಮಾಡುತ್ತಿರುವುದು ನೋಡಿ ಈ ಪುಟ್ಟ ಹುಡುಗ ಸಹಜವಾಗಿಯೇ ಸಾಧನೆಗಳ ಹಾದಿಯಲ್ಲಿ ಸಾಗುತ್ತಿದ್ದಾನೆ ಎಂದರೆ ತಪ್ಪಾಗಲಾರದು.
ಕಲಿಕೆಗೆ ಸ್ಪೂರ್ತಿ ಎಂದರೆ ಒಂದು ವರ್ಷದ ಮಗು ಇರುವಾಗಲೇ ಎರಡು ಮೂರು ಪುಸ್ತಕ ತಂದು, ಹೇಳಿಕೊಟ್ಟು ಚಿತ್ರಗಳನ್ನು ತೋರಿಸುತ್ತಾ ಕಲಿಕೆಗೆ ಹಾಕಿಕೊಟ್ಟ ಬದ್ರಬುನಾದಿಯ ಅಡಿಪಾಯ ಎಂದರೆ ತಪ್ಪಾಗಲಾರದು. ಹೀಗಾಗಿ ಈಗ ಎಲ್ಲಾ ಕಲಿಕೆಯ ಬಲದಿಂದ ಇಂದು ಬಾಲಕ ಸರಿಸುಮಾರು 12 ಪುಸ್ತಕಗಳಾದ ವಾಹನಗಳು, ತರಕಾರಿಗಳು, ಹಣ್ಣುಗಳು ಪುಸ್ತಕ ಸೇರಿದಂತೆ ಇತರೆ ಪುಸ್ತಕಗಳಲ್ಲಿ ಇರುವ ವಿಷಯಗಳನ್ನು ತಾನೇ ತೆಗೆದುಕೊಂಡು ಮತ್ತೋಬ್ಬರಿಗೆ ಹೇಳಿಕೊಡುವಷ್ಟು ಚತುರ – ಚಾಣ್ಯಕ್ಯತೆ ತಾನೀಶ್ ಹೊಂದಿದ್ದಾನೆ.
ಜೊತೆಗೆ ದೇಶದ ಮೂವತ್ತು ರಾಜ್ಯಗಳ ಹೆಸರು ಮತ್ತು ರಾಜಧಾನಿಗಳ ಹೆಸರು 150 ಜನ ಮಹಾನ್ ಸಾಧಕರ ಭಾವಚಿತ್ರಗಳ ಹೆಸರು, ಜ್ಞಾನಪೀಠ ಪ್ರಶಸ್ತಿ ಪಡೆದ ಪುರಸ್ಕೃತರ ಹೆಸರು, ಕರ್ನಾಟಕದ 30 ಜಿಲ್ಲೆಗಳು, ಪ್ರಂಪಚದ ವಿವಿಧ ದೇಶಗಳ ಹೆಸರುಗಳು, 90 ಪ್ಲಾಷ್ ಕಾರ್ಡ್ಸ್ ಹೆಸರುಗಳು ಸೇರಿದಂತೆ ಪ್ರಚಲಿತ ವಿದ್ಯಮಾನದ ಹಾಗೂ ಸಾಮಾನ್ಯ ಜ್ಞಾನದ 80 ಪ್ರಶ್ನೆಗಳಿಗೆ ಥಟ್ ಅಂತಾ ಉತ್ತರ ನೀಡುತ್ತಾನೆ.
ಇನ್ನು ಹಣ್ಣುಗಳ, ತರಕಾರಿಗಳ, ಬಣ್ಣಗಳ, ವಾಹನಗಳ ಹೆಸರುಗಳು ಹಾಗೂ ಮಾನವ ದೇಹದ ಅಂಗಾಗಳು ಹಾಗೆ ಕನ್ನಡ ವರ್ಣಮಾಲೆ, 12 ತಿಂಗಳುಗಳು, A TO Z ಅಲ್ಪಬೇಟ್ಸ್, ಆಕ್ಷನ್ ವರ್ಡ್ಸ್ ಗಳನ್ನು ಬಹುಬೇಗನೆ ಅವುಗಳ ಹೆಸರನ್ನು ಹೇಳುವ ಮೂಲಕ ಅಚ್ಚರಿ ಮೂಡಿಸುತ್ತಾನೆ.
ಈಗಾಗಲೇ ಇವನು ವಿಶ್ವದ 197 ರಾಷ್ಟ್ರಗಳ ರಾಷ್ಟ್ರಧ್ವಜಗಳ ಹೆಸರನ್ನು ಪಟ ಪಟನೇ ಹೇಳುವ ಮೂಲಕ ಎಲ್ಲರನ್ನೂ ಹುಬ್ಬೇರಿಸುವಂತೆ ಸಾಧನೆ ಮಾಡಿದಾನೆ.ಮಾಡುವ ಮೂಲಕ Karnataka achievers book of record ಸ್ಥಾನ ಪಡೆಯುವದರೊಂದಿಗೆ ಹೊಸ ವಿಶೇಷ ದಾಖಲೆಯಗೆ ಸೆರ್ಪಡೆಗೊಂಡಿದ್ದಾನೆ.
ಹೀಗಾಗಿ ಇವನ ಈ ಅಪ್ರತಿಮ ಸಾಧನೆ ಕಂಡು ಹಲವು ಸಂಘ – ಸಂಸ್ಥೆಯವರು ಶುಭಹಾರೈಸಿದ್ದಾರೆ.ವಿವಿಧ ಮಠಗಳ ಸ್ವಾಮಿಜಿಯವರು ಶುಭಾಶಿರ್ವಾದ ಮಾಡಿರುತ್ತಾರೆ.ಜೊತೆಗೆ ಕರ್ನಾಟಕ ಆಚೀವರ್ಸ್ ಬುಕ್ ಆಫ್ ರೆಕಾರ್ಡ್ ಸಂಸ್ಥಾಪಕ ಅಧ್ಯಕ್ಷೆ ಮತ್ತು ಮುಖ್ಯಸ್ಥರು ಆದ ಡಾ.ಅಂಬಿಕಾ ಹಂಚಾಟೆಯವರು ಈ ಬಾಲಕನನ್ನು ಅಭಿನಂದಿಸಿ A tiny boy shorp memory ಎಂಬ ಬಿರುದು ನೀಡಿ ಸನ್ಮಾನಿಸಿ ಗೌರವಿಸಿದಾರೆ.
ಈ ಬಾಲಕನಿಗೆ ಸಂಧ ಗೌರವ ಸನ್ಮಾನ ಹೀಗಿವೆ:
ತಾನೀಶ್ ಎನ್ ಸಾಧನೆಯನ್ನು ಗುರುತಿಸಿ ನಾಡಿನ ಸಂಘ ಸಂಸ್ಥೆಗಳು ಗೌರವ ಸನ್ಮಾನವನ್ನು ಮಾಡಿರುತ್ತಾರೆ.ಅದರಲ್ಲಿ ಪ್ರಮುಖವಾಗಿ ಅಖಿಲ ಕರ್ನಾಟಕ ಪವರ್ ಸ್ಟಾರ್ ಪವನ್ ಕಲ್ಯಾಣ ಅಭಿಮಾನಿಗಳ ಸೇವಾ ಸಂಘ(ರಿ.) ವತಿಯಿಂದ ಹಾಗೂ ಲಲಿತ ಕಲಾ ಸಂಘ (ರಿ.) ರೈಲು ಗಾಲಿ ಕಾರ್ಖಾನೆಯವರು ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಸಂದರ್ಭದಲ್ಲಿ ಜೊತೆಗೆ ಇತ್ತೀಚೆಗೆ ಕೋಲಾರದಲ್ಲಿ ನಡೆದ 19 ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ ಇದಲ್ಲದೆ
ಮಾಲೂರು ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಗೌರವ ಸನ್ಮಾನಗಳು ಸಂಧಿವೆ.
ಶುಭಹಾರೈಕೆಯ ನುಡಿ
ತಾನೀಶ್ ನ ಈ ಎಲ್ಲಾ ಉನ್ನತ ಮಟ್ಟದ ಸಾಧನೆಯ ಹಿಂದೆ ಅವನ ತಂದೆ ತಾಯಿಯವರ ಪರಿಶ್ರಮ ಇದೆ ಇರುತ್ತದೆ.ಅವರಿಗೆ ಅಭಿನಂದನೆ ಸಲ್ಲಿಸುವುದು ನಮ್ಮೆಲ್ಲರ ಜವಾಬ್ದಾರಿ ಮತ್ತು ಕರ್ತವ್ಯವಾಗಿದೆ. ಜೊತೆ ಜೊತೆಗೆ ಅಮ್ಮನ ಸಹಕಾರದಿಂದ ಭರತನಾಟ್ಯ, ಸ್ಕೇಟಿಂಗ್ ಕಲಿಕೆ,ಅಪ್ಪನ ಸಹಕಾರದಿಂದ ಕರಾಟೆ ಕಲಿಕೆ ಸೇರಿದಂತೆ ತಬಲ ತರಬೇತಿ ಪಡೆಯುತ್ತಿರುವುದು ಒಳ್ಳೆಯ ಬೆಳವಣಿಗೆ ಪೂರಕವಾಗಲಿದೆ.
ಹಾಗಾಗಿ ಅಕ್ಕರೆಯ ಕಂದ ತಾನೀಶ್ ಗೆ ಯಾವುದೇ ವಿಷಯವನ್ನು ಒಮ್ಮೆ ಹೇಳಿದರೆ ಸಾಕು ಕೂಡಲೇ ಅರ್ಥೈಸಿಕೊಂಡು ಮರು ಕ್ಷಣದಲ್ಲಿಯೇ ನಮಗೆ ಹೇಳಿ ಕೋಡುವಷ್ಟು ಸಮರ್ಥವಾದ ಜ್ಞಾನವನ್ನು ಪಡೆದಿದ್ದಾನೆ. ಆದ್ದರಿಂದ ಇವನು ಎಲ್ಲಾ ಕ್ಷೇತ್ರದಲ್ಲಿಯೂ ಅಪ್ರತಿಮ ಸಾಧನೆ ಮಾಡಿ ನಮ್ಮ ಕರುನಾಡಿಗೆ ಕೀರ್ತಿ ತರುವ ಕೆಲಸ ಮಾಡಲೆಂದು ಆಶಿಸುತ್ತೇವೆ. ಈ ಮೂಲಕ ವಿಶ್ವಮಾನವರಾದ ಕುವೆಂಪು, ಅಂಬೇಡ್ಕರ್, ಬುದ್ದ, ಬಸವ ಮಹಾನ್ ಚೇತನರ ಹಾದಿಯಲ್ಲಿ ಸಾಗಲಿ ಎಂದು ಪ್ರಾರ್ಥಿಸಿ, ಶುಭಾರೈಸುತ್ತೇವೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243