ರಾಜಕೀಯ

ಟ್ರೋಲ್ ಆಯ್ತು ಎಚ್ಡಿಕೆ ಬಜೆಟ್: ಇದು ಅಣ್ತಮ್ಮ ಬಜೆಟ್ ಎಂದ ನೆಟ್ಟಿಗರು !

Published

on

ಸುದ್ದಿದಿನ ಡೆಸ್ಕ್: ಸಾಲಮನ್ನಾ ವಿಚಾರ ಸೇರಿದಂತೆ ವಿವಿಧ ಕಾರಣಕ್ಕೆ ರಾಜ್ಯ ಹಾಗೂ ದೇಶದ ಗಮನ ಸೆಳೆದಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಬಜೆಟ್ ಕುರಿತು ಪರ, ವಿರೋಧ ಹೇಳಿಕೆ ಕೇಳಿ ಬಂದಿದೆ.

ಇದು ಪೂರ್ಣ ಪ್ರಮಾಣದ ಬಜೆಟ್ ಅಲ್ಲ. ಕೇವಲ ಒಂದು ಪ್ರದೇಶಕ್ಕೆ ಸೀಮಿತವಾಗಿದೆ ಎಂದು ಬಿಜೆಪಿ ಸೇರಿದಂತೆ ಸ್ವತಃ ಕಾಂಗ್ರೆಸ್ ನ ಕೆಲವು ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರೈತರ ಸಾಲಮನ್ನಾ ವಿಚಾರ ಹೊರತುಪಡಿಸಿ ಉಳಿದ ಬಹುತೇಕ ಭಾಗ ರಾಮನಗರ, ಮಂಡ್ಯ, ಮೈಸೂರು ಭಾಗಕ್ಕೆ ಸೀಮಿತವಾಗಿದೆ ಎಂದು ದೂರಲಾಗುತ್ತಿದೆ. ಇನ್ನು ಮಾಜಿ ಸಿಎಂ ಯಡಿಯೂರಪ್ಪ ಕೂಡ ‘ಕುಮಾರಸ್ವಾಮಿ ರಾಜ್ಯದ ಜನರಿಗೆ ದ್ರೋಹ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಟ್ರೋಲ್ ಆಯ್ತು ಎಚ್ಡಿಕೆ ಬಜೆಟ್: ಇದು ಅಣ್ತಮ್ಮ ಬಜೆಟ್ ಎಂದ ನೆಟ್ಟಿಗರು !

ಇನ್ನು ಸಾಮಾಜಿಕ ಜಾಲತಾಣದಲ್ಲಿ ಕುಮಾರಸ್ವಾಮಿ ಬಜೆಟ್ ಕುರಿತು ಹಲವರು ಟ್ರೋಲ್ ಮಾಡಿದ್ದಾರೆ. ಹಳೇ ಬಸ್ ಒಂದರ ಮೇಲೆ ಕುಮಾರಸ್ವಾಮಿ ಹಾಗೂ ಎಚ್.ಡಿ.ರೇವಣ್ಣ ಅವರ ಭಾವಿತ್ರ ಬಿಡಿಸಿ ಅದರ ಮೇಲೆ ಅಣ್ತಮ್ಮ ಬಜೆಟ್- ಹಾಸನ, ರಾಮನಗರ, ಹಳೇ ಮೈಸೂರು ಎಂದು ಬರೆಯಲಾಗಿದ್ದು, ವಾಟ್ಸ್ ಆಪ್, ಫೇಸ್ ಬುಕ್ ಸೇರಿದಂತೆ ಅಂತರ್ಜಾಲ ತುಂಬಾ ಹರಿದಾಡುತ್ತಿದೆ. ಅದಲ್ಲದೇ ವಿವಿಧ ರೀತಿಯ ಟ್ರೋಲ್ ಕಂಡುಬರುತ್ತಿವೆ.

Karnataka budget 2018 Troll

Leave a Reply

Your email address will not be published. Required fields are marked *

Trending

Exit mobile version