ರಾಜಕೀಯ
ಬಜೆಟ್: ಮಠಗಳಿಗೆ ಬಿಗ್ ಗಿಫ್ಟ್ !
ಸುದ್ದಿದಿನ ಡೆಸ್ಕ್: ಮುಖ್ಯಮಂತ್ರಿ ಕುಮಾರಸ್ವಾಮಿ ತಮ್ಮ ಚೊಚ್ಚಲ ಬಜೆಟ್ ನಲ್ಲಿ ಮಠಮಾನ್ಯಗಳಿಗೆ ಭರ್ಜರಿ ಕೊಡುಗೆ ನೀಡಿದ್ದಾರೆ. ಚಿತ್ರದುರ್ಗದ ಮಾದಾರ ಚನ್ನಯ್ಯ ಸ್ವಾಮಿ ಮಠ, ಕುಂಚಟಿಗ ಮಠ, ಕಾಗಿನೆಲೆ ಮಠ ಸೇರಿದಂತೆ ವಿವಿಧ ಮಠಗಳಿಗೆ ಸುಮಾರು 25 ಕೋಟಿ ರೂಪಾಯಿ ಅನುದಾನ ಮೀಸಲಿರಿಸಿದ್ದಾರೆ. ಯಡಿಯೂರಪ್ಪ ಸರ್ಕಾರದ ನಂತರ ಮಠಗಳಿಗೆ ಅಷ್ಟು ಕೊಡುಗೆ ಸಿಕ್ಕರಲಿಲ್ಲ. ಈಗ ಮತ್ತೆ ಕುಮಾರಸ್ವಾಮಿ ಅವರು ಮಠಗಳಿಗೆ ಅನುದಾನ ಮೀಸಲಿರಿಸಿದ್ದಾರೆ.