ದಿನದ ಸುದ್ದಿ
ಕಿರು ಆಹಾರ ಸಂಸ್ಕರಣಾ ಘಟಕ ಸ್ಥಾಪನೆಯಲ್ಲಿ ಕರ್ನಾಟಕಕ್ಕೆ 2 ನೇ ಸ್ಥಾನ : ಸಚಿವ ಬಿ.ಸಿ. ಪಾಟೀಲ್
ಸುದ್ದಿದಿನ ಡೆಸ್ಕ್ : ಆತ್ಮ ನಿರ್ಭರ ಭಾರತ ಅಭಿಯಾನದಡಿ ಕಿರು ಆಹಾರ ಸಂಸ್ಕರಣೆ ಯೋಜನೆ ಜಾರಿಯಲ್ಲಿ ಕರ್ನಾಟಕ ದೇಶದಲ್ಲೇ ದ್ವಿತೀಯಸ್ಥಾನ ಗಳಿಸಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದ್ದಾರೆ. ಬೆಂಗಳೂರಿನಲ್ಲಿಂದು ಈ ವಿಷಯ ತಿಳಿಸಿದ ಅವರು, ಯೋಜನೆಯ ಲಾಭ ಪಡೆದು ಕಿರು ಆಹಾರ ಸಂಸ್ಕರಣಾ ಉದ್ಯಮಿಯಾಗಲು ಸುವರ್ಣ ಅವಕಾಶ ಕಲ್ಪಿಸಲಿದೆ ಎಂದರು.
ಈ ಯೋಜನೆಗೆ ಮತ್ತಷ್ಟು ಶಕ್ತಿ ತುಂಬಲು ಹೆಚ್ಚುವರಿಯಾಗಿ ಶೇಕಡ 15 ರಷ್ಟು ಸಹಾಯಧನವನ್ನು ವಯಕ್ತಿಕ ಉದ್ದಿಮೆದಾರರಿಗೆ ರೈತರ ಗುಂಪುಗಳಿಗೆ ನೀಡಲಾಗುತ್ತಿದೆ. ಇದರ ಫಲವಾಗಿ ಯೋಜನೆಯ ಅನುಷ್ಠಾನದಲ್ಲಿ ರಾಜ್ಯ, ದೇಶದಲ್ಲೇ 2ನೇ ಸ್ಥಾನ ಪಡೆದುಕೊಂಡಿದೆ.
340ಉದ್ಯಮಿಗಳಿಗೆ ಸಾಲ ಮಂಜೂರಾತಿಯಾಗಿದ್ದು, ಕಿರುಆಹಾರ ಸಂಸ್ಕರಣಾ ವಲಯದಲ್ಲಿ 52ಕೋಟಿ 62ಲಕ್ಷ ರೂಪಾಯಿ ಬಂಡವಾಳ ಹೂಡಿಕೆಯಾಗಿದೆ.
ಬೆಲ್ಲ, ತೆಂಗಿನ ಉತ್ಪನ್ನಗಳು, ಸಿರಿಧಾನ್ಯಗಳ ಉತ್ಪನ್ನಗಳು, ಉಪ್ಪಿನಕಾಯಿ, ಮೆಣಸಿನಕಾಯಿ, ಬೇಕರಿ, ತರಕಾರಿ ಉತ್ಪನ್ನಗಳು, ಕಾಫಿ, ಮೀನು ಮಾಂಸ ಉತ್ಪನ್ನ ಸೇರಿದಂತೆ ಇತ್ಯಾದಿ ಆಹಾರ ಸಂಸ್ಕರಣಾ ಘಟಕಗಳಿಗೆ ಮಂಜೂರಾತಿ ನೀಡುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243,