ದಿನದ ಸುದ್ದಿ
ದಾವಣಗೆರೆ | ಒಟ್ಟು ಕೊರೋನಾ ಸೋಂಕಿತರ ಸಂಖ್ಯೆ 89 : 83 ಆ್ಯಕ್ಟೀವ್ ಕೇಸ್
ಸುದ್ದಿದಿನ,ದಾವಣಗೆರೆ: ಶನಿವಾರ ಜಿಲ್ಲಾಕೇಂದ್ರದಲ್ಲಿ ಹೊಸದಾಗಿ 1 ಕೊರೋನಾ ಕೇಸ್ ಪತ್ತೆಯಾಗಿದೆ. ಇದರೊಂದಿಗೆ ಖಚಿತ ಪ್ರಕರಣಗಳ ಸಂಖ್ಯೆ 89ಕ್ಕೆ ಏರಿಕೆಯಾಗಿದೆ.
ಬಾಷಾನಗರದ 65 ವರ್ಷದ ವೃದ್ಧೆ(ಪಿ.1061) ಸೋಂಕಿಗೆ ತುತ್ತಾಗಿದ್ದು, ಇವರಿಗೆ ಸ್ಟಾಫ್ ನರ್ಸ್(ಪಿ.533) ಸಂಪರ್ಕದಿಂದ ಕೊರೋನಾ ಹರಡಿದೆ. ಸದ್ಯ ಈವರೆಗೆ 89 ಪ್ರಕರಣ ಖಚಿತಪಟ್ಟಿದ್ದು, ಇಬ್ಬರು ಗುಣಮುಖರಾಗಿದ್ದಾರೆ.ನಾಲ್ವರು ಸಾವಿಗೀಡಾಗಿದ್ದಾರೆ. ಒಟ್ಟು 83 ಸಕ್ರಿಯ ಪ್ರಕರಣಗಳಿವೆ.
ಕೋವಿಡ್19: 2020ರ 16ಮೇ ಸಂಜೆ 5 ಗಂಟೆಯವರೆಗಿನ ವರದಿ
- ಒಟ್ಟು ಪ್ರಕರಣಗಳು: 89
- ಮೃತಪಟ್ಟವರು: 04
- ಗುಣಮುಖರಾದವರು: 02
- ಹೊಸ ಪ್ರಕರಣಗಳು: 01
- ಆ್ಯಕ್ಟಿವ್ ಕೇಸ್: 83
ಇತರೆ ಮಾಹಿತಿ
ಟೆಲಿಮೆಡಿಸಿನ್ ಸೌಲಭ್ಯದ ಮಾಹಿತಿ, ತಬ್ಲಿಘಿ ಜಮಾತ್ ನಲ್ಲಿ ಭಾಗವಹಿಸಿದವರಿಗೆ ಸೂಚನೆಗಳು, ಕೊರೊನ ನಿಗಾ ಅಪ್ಲಿಕೇಶನ್ ಹಾಗೂ ಸಹಾಯವಾಣಿ ವಿವರಗಳಿವೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243