ರಾಜಕೀಯ

ಆದಾಯ ಗಳಿಕೆಯಲ್ಲಿ ಕರ್ನಾಟಕ ಶಾಸಕರೇ ಮೇಲುಗೈ; ಚತ್ತೀಸಗಡ ಹಿಂದೆ, ಎಡಿಆರ್ ವರದಿ ಬಹಿರಂಗ

Published

on

ಸುದ್ದಿದಿನ ಡೆಸ್ಕ್: ಕರ್ನಾಟಕದ ಶಾಸಕರು ತಮ್ಮ ಕ್ಷೇತ್ರಗಳ ಅಭಿವೃದ್ಧಿಗೆ ಆದ್ಯತೆ ನೀಡಿದ್ದಾರೋ ಇಲ್ಲವೋ ಗೊತ್ತಿಲ್ಲ. ಆದರೆ, ಶಾಸಕರು ತಾವು ಮಾತ್ರ ಸ್ವಾಭಿವೃದ್ಧಿ ಆಗುವುದನ್ನಂತು ಮರಿತಿಲ್ಲ. ಇದಕ್ಕೆ ಸಾಕ್ಷಿ ನೀಡುವಂತ ಅಚ್ಚರಿ ಮಾಹಿತಿ ಬಹಿರಂಗವಾಗಿದೆ. ಈ ಕುರಿತು ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್‌ ಹಾಗೂ ನ್ಯಾಷನಲ್ ಎಲೆಕ್ಷನ್ ವಾಚ್ ಜಂಟಿಯಾಗಿ ಶಾಸಕರ ಅಫಿಡಾವಿಟ್ ಅಧ್ಯಯನ ನಡೆಸಿ ವರದಿ ಬಿಡುಗಡೆ ಮಾಡಿದೆ.

ಭಾರತದ ಒಟ್ಟು ಶಾಸಕರ ಸರಾಸರಿ ವಾರ್ಷಿಕ ಆದಾಯ 24.59 ಲಕ್ಷ ರೂ.ಗಳಾಗಿದೆ. ಇದರಲ್ಲಿ ಕರ್ನಾಟಕ ಶಾಸಕರ ಸರಾಸರಿ ವಾರ್ಷಿಕ ವರಮಾನದಲ್ಲಿ ಹೆಚ್ಚಳ ಕಂಡಿದ್ದು, ವಾರ್ಷಿಕ ಆದಾಯ 1 ಕೋಟಿ ರೂ. ಗಳಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಇದು ದೇಶದಲ್ಲಿಯೇ ಅತಿ ಹೆಚ್ಚಾಗಿದೆ. ಛತ್ತೀಸಘಡ್ ಶಾಸಕರ ವಾರ್ಷಿಕ ಆದಾಯ 5.4 ಲಕ್ಷ ರೂ.ಗಳಾಗಿದ್ದು, ಇದು ದೇಶದಲ್ಲೇ ಅತಿ ಕಡಿಮೆಯಾಗಿದೆ.

ಕರ್ನಾಟಕ ರಾಜ್ಯದ 203 ಶಾಸಕರ ಪ್ರಮಾಣ ಪತ್ರ ಪರಿಶೀಲಿಸಿದಾಗ ಅವರ ವಾರ್ಷಿಕ ಆದಾಯ
1.11 ಕೋಟಿ ರೂ.ಗಳಾಗಿದೆ. ನಂತರದ ಸ್ಥಾನದಲ್ಲಿರುವ ಮಹಾರಾಷ್ಟ್ರದ ಶಾಸಕರ ಸರಾಸರಿ ಆದಾಯ 43.4 ಲಕ್ಷ ರೂ.ಗಳಾಗಿದೆ. ಮಹಿಳೆಯರಿಗೆ ಹೋಲಿಸಿದರೆ
ಪುರುಷರ ಆದಾಯ ದುಪ್ಪಟ್ಟಾಗಿದೆ. ಅನಕ್ಷರಸ್ಥ ಶಾಸಕರ ಘೋಷಿತ ಸರಾಸರಿ ಆದಾಯ 9.31 ಲಕ್ಷ ರೂ.ಗಳಾಗಿದೆ. ಅಲ್ಲದೇ ಅರ್ಧದಷ್ಟು ಶಾಸಕರು ತಾವು ಉದ್ಯಮಿಗಳು ಅಥವಾ ಕೃಷಿಕರು ಎಂದು ಹೇಳಿಕೊಂಡಿದ್ದಾರೆ.

ದೇಶದ 4,086 ಶಾಸಕರಲ್ಲಿ 3,145 ಶಾಸಕರು ಸಲ್ಲಿಸಿದ ಪ್ರಮಾಣ ಪತ್ರಗಳ ಅಧ್ಯಯನ ನಡೆಸಿ ಅವರ ಆದಾಯ ಲೆಕ್ಕ ಹಾಕಲಾಗಿದೆ. 941 ಶಾಸಕರು ಆದಾಯದ ಘೋಷಣೆ ಮಾಡಿಲ್ಲ. 3,145 ಶಾಸಕರ ಸರಾಸರಿ ಆದಾಯ 24.59 ಲಕ್ಷ ರೂ.ಗಳಾಗಿದೆ. ಆದರೆ, ದಕ್ಷಿಣ ಭಾಗದಲ್ಲಿರುವ 711 ಶಾಸಕರ ಸರಾಸರಿ ವಾರ್ಷಿಕ ಆದಾಯ 51.99 ಲಕ್ಷ ರೂ.ಗಳಾಗಿದೆ ಎಂದು ವರದಿ ತಿಳಿಸಿದೆ.

Leave a Reply

Your email address will not be published. Required fields are marked *

Trending

Exit mobile version