/home/u584543641/domains/suddidina.com/public_html/wp-content/themes/zox-news/amp-single.php on line 77

Warning: Trying to access array offset on value of type bool in /home/u584543641/domains/suddidina.com/public_html/wp-content/themes/zox-news/amp-single.php on line 77
" width="36" height="36">

ದಿನದ ಸುದ್ದಿ

ದಾವಣಗೆರೆ | ಶಿವಕುಳೆನೂರು ರೈತರ ಭೂಮಿವಶ ಕಾರ್ಯದಿಂದ ಹಿಂದೆ ಸರಿದ ಕಂದಾಯ ಇಲಾಖೆ; ನಮ್ಮ ಹೊರಾಟಕ್ಕೆ ಸಿಕ್ಕ ಮೊದಲ‌ಜಯ : ರಾಘು ದೊಡ್ಡಮನಿ

Published

on

ಸುದ್ದಿದಿನ, ದಾವಣಗೆರೆ : ನಮ್ಮ ಕರ್ನಾಟಕ ರಣಧೀರ ಪಡೆಯ ಪಾದಯಾತ್ರೆಯ ಹೋರಾಟದ ರಣಕಹಳೆಗೆ ಮಣಿದು‌ 24 ಗಂಟೆ ಒಳಗೆ ದಾವಣಗೆರೆ ಜಿಲ್ಲೆ, ಚನ್ನಗಿರಿ ತಾಲ್ಲೂಕು, ಸಂತೆಬೆನ್ನೂರು ಸಮೀಪದ ಶಿವಕುಳೆನೂರು ಗ್ರಾಮದ ಬಡರೈತರ ಭೂಮಿಯನ್ನು ವಶಪಡಿಸಿಕೊಳ್ಳುತ್ತಿದ್ದ ಜಿಲ್ಲಾ ಹಾಗೂ ತಾಲ್ಲೂಕು ಆಡಳಿತ (ಕಂದಾಯ ಇಲಾಖೆ) ತಮ್ಮ ಆದೇಶದಿಂದ ಹಿಂದೆ ಸರಿದಿ್ದೆದೆ. ಇದು ನಮ್ಮ ಹೋರಾಟದ ಮೊದಲ ಜಯ ಎಂದು ರಣಧೀರ ಪಡೆಯ ಜಿಲ್ಲಾ ಅದ್ಯಕ್ಷ ರಾಘು ದೊಡ್ಡಮನಿ ಸಂತಸ ವ್ಯಕ್ತಪಡಿಸಿದ್ದಾರೆ.

ಅದಷ್ಟು ಬೇಗ ಆ ರೈತರಿಗೆ ಸಂಪೂರ್ಣವಾದ ನ್ಯಾಯ ಕೊಡುವುದಾಗಿ ತಹಶಿಲ್ದಾರ್ ಕಛೇರಿಯಲ್ಲಿ ಸಭೆ ಕರೆದು ಆ ಊರಿನ ಗ್ರಾಮಸ್ಥರ ಮುಂದೆಯೇ ಒಪ್ಪಿಕೊಂಡಿದ್ದಾರೆ ಎಂದು ತಿಳಿಸಲು ಹರ್ಷಿಸುತ್ತೇನೆ.ಸಹಕರಿಸಿದ ಎಲ್ಲಾ ಹೃದಯಸ್ಪರ್ಶಿಗಳಿಗೂ ನಾವು ಕೃತಜ್ಞರಾಗಿದ್ದೇವೆ. ವಿಶೇಷವಾಗಿ ಚನ್ನಗಿರಿ ತಾಲ್ಲೂಕು ಅಧ್ಯಕ್ಷರಾದ ಟಿ. ರುದ್ರೇಶ್ ರವರಿಗೆ ಮತ್ತು ತಾಲ್ಲೂಕು ಸಮಿತಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version