ರಾಜಕೀಯ

ಸ್ಥಳೀಯ ಸಂಸ್ಥೆಗಳ ಚುನಾವಣೆ: ಮತದಾನ ಮುಗಿದರೂ ನಿಲ್ಲದ ವಾಮಾಚಾರ !

Published

on

ಸುದ್ದಿದಿನ, ತುಮಕೂರು: ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳಲ್ಲಿ ಜಿದ್ದಾಜಿದ್ದಿ ಮೂಡಿಸಿದ್ದು, ಕೆಲವರು ಅನ್ಯ ಮಾರ್ಗಗಳನ್ನು ಅನುಸರಿಸುತ್ತಿರುವುದು ವರದಿಯಾಗಿದೆ. ಮತದಾನ ಮುಗಿದ ಬಳಿಕವೂ ಕೆಲವು ಕಿಡಿಗೇಡಿಗಳು ವಾಮಚಾರ ನಡೆಸಿ ಪ್ರತಿಸ್ಪರ್ಧಿಗಳನ್ನು ಎದುರಿಸುವ ಪ್ರಯತ್ನ ಮಾಡಿದ್ದಾರೆ.

ಹೌದು, ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ವಾರ್ಡ್ ನಂ 12ರ ಅಬ್ದುಲ್ ಎಂಬುವರ ಮನೆ ಮುಂದೆ ಕಿಡಿಗೇಡಿಗಳು ವಾಮಾಚಾರ ನಡೆಸಿದ್ದಾರೆ. ಗೂಬೆ ತಲೆ ಕತ್ತರಿಸಿ ಮನೆಮುಂದೆ ಅದರ ರಕ್ತ ಚೆಲ್ಲಿ ಭಯಾನಕ ವಾಮಚಾರ ನಡೆಸಲಾಗಿದೆ ಎಂದು ದೂರಲಾಗಿದೆ.

ಚಿತ್ರದುರ್ಗ ನಗರಸಭೆಗೆ ಚುನಾವಣೆ: ಅಭ್ಯರ್ಥಿಗಳಲ್ಲಿ ತಳಮಳ

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಅಬ್ದುಲ್ ಎಂಬುವರು ಕಾಂಗ್ರೆಸ್ ಅಭ್ಯರ್ಥಿ ಶೋಭಾರಾಣಿಗೆ ಬೆಂಬಲ ವ್ಯಕ್ತ ಪಡಿಸಿದ್ದರು. ಈ ಕಾರಣಕ್ಕೆ ಕಿಡಿಗೇಡಿಗಳು ಗೂಬೆ ತಲೆಯನ್ನು ಕತ್ತರಿಸಿ ವಾಮಾಚಾರ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಇದರಿಂದ ಸ್ಥಳೀಯರು ಆತಂಕಗೊಂಡಿದ್ದಾರೆ. ಚುನಾವಣೆ ಗೆಲುವು ಸಾಧಿಸಲು ಕೆಲವರು ಇಂತಹ ಮಾರ್ಗ ಅನುಸರಿಸುತ್ತಿದ್ದಾರೆ. ಆದರೆ ಇದರಿಂದ ಯಾವುದೇ ಉಪಯೋಗವಿಲ್ಲ. ಕೇವಲ ಜನರಲ್ಲಿ ಆತಂಕ ಮೂಡಿಸಲು ಇಂತಹ ಪ್ರಯತ್ನ ಮಾಡಲಾಗುತ್ತಿದೆ ಎಂದು ಜನ ಆರೋಪಿಸಿದ್ದಾರೆ.

Leave a Reply

Your email address will not be published. Required fields are marked *

Trending

Exit mobile version