ರಾಜಕೀಯ

ರಾಜ್ಯಸಭಾ ಸದಸ್ಯರ ಮೇಲೆ ಕಿಡ್ನಾಪ್ ಕೇಸ್| ಯಾರ್ಯಾರ್ ಇದಾರೆ ಲಿಸ್ಟ್ ನಲ್ಲಿ ನೋಡಿ?

Published

on

ಸುದ್ದಿದಿನ ಡೆಸ್ಕ್ | ರಾಜ್ಯಸಭೆಯ 64 ಸದಸ್ಯರು ತಮ್ಮ ಮೇಲೆ ಅಪಹರಣ ಪ್ರಕರಣ ಇರುವುದನ್ನು ಸ್ವತಃ ಘೋಷಿಸಿ ಕೊಂಡಿದ್ದಾರೆ ಎಂದು ಅಸೋಸಿಯೇಷನ್ ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ವರದಿ ಬಿಡುಗಡೆ ಮಾಡಿದೆ.

ಸಂಸ್ಥೆಯು ಅಭ್ಯರ್ಥಿಗಳು ಸಲ್ಲಿಸಿದ ಅಫಿಡಾವಿಟ್ ಪರಿಶೀಲಿಸಿ ಈ ಮಾಹಿತಿ ಬಹಿರಂಗ ಪಡಿಸಿದೆ. ಸದಸ್ಯರು ಸಲ್ಲಿಸಿದ ಅಫಿಡವಿಟ್ ನಲ್ಲಿ 359, 360, 361, 362, 363, 364, 365, 366, 367, 368 ಮತ್ತು 369 ಐಪಿಸಿ ಸೆಕ್ಷನ್ಗಳನ್ನು ಉಲ್ಲೇಖಿಸಿದ್ದಾರೆ. ಈ ಸೆಕ್ಷನ್ಗಳು ಕಿಡ್ನಾಪ್ ಪ್ರಕರಣಗಳಿಗೆ ಸಂಬಂಧಿಸಿದವು.

ಕಿಡ್ನಾಪ್ ಕೇಸ್ ದಾಖಲಾಗಿರುವುದಾಗಿ ಘೋಷಿಸಿಕೊಂಡಿರುವ 64 ಸದಸ್ಯರಲ್ಲಿ ಬಿಜೆಪಿಯ 16 , ಕಾಂಗ್ರೆಸ್, ರಾಷ್ಟ್ರೀಯ ಜನತಾ ದಳ (ಆರ್ಜೆಡಿ) ತಲಾ ಆರು, ಶರತ್ ಪವಾರ್ ನೇತೃತ್ವದ ನಾಷಿನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್ಸಿಪಿ) ಐದು, ಬಿಜು ಜನತಾ ದಳ (ಬಿಜಿಡಿ) ನಾಲ್ವರು ಹಾಗೂ ಸ್ವರಾಜ್ ವಾದಿ ಪಾರ್ಟಿ ಮತ್ತು ತೆಲುಗು ದೇಶಂ ಪಾರ್ಟಿ ತಲಾ ಇಬ್ಬರು ಸದಸ್ಯರು ತಮ್ಮ ಮೇಲೆ ಕಿಡ್ನಾಪ್ ಕೇಸ್ ಇರುವುದನ್ನು ಸ್ವಯಂ ಘೋಷಿಸಿಕೊಂಡಿದ್ದಾರೆ. ತೃಣಮೂಲ ಕಾಂಗ್ರೆಸ್ ಮತ್ತು ಸಿಪಿಐ (ಎಂ) ಇಬ್ಬರು, ಜೆಡಿಯು, ಎಲ್ಜೆಪಿ, ಟಿಆರ್ಎಸ್ ತಲಾ ಒಬ್ಬ ಸದಸ್ಯರನ್ನು ಹೊಂದಿದೆ.

ಯಾವ ರಾಜ್ಯ ಎಷ್ಟು ಮಂದಿ..?

ಬಿಹಾರ, ಉತ್ತರ ಪ್ರದೇಶವು ಒಂಭತ್ತು ಸದಸ್ಯರು ಹೊಂದುವ ಪ್ರಥಮ ಸ್ಥಾನದಲ್ಲಿದ್ದರೆ, ಮಹಾರಾಷ್ಟ್ರ ಎಂಟು, ಪಶ್ಚಿಮ ಬಂಗಾಳ ಆರು, ಒರಿಸ್ಸಾ ಮತ್ತು ತಮಿಳುನಾಡು ನಾಲ್ವರು, ಆಂಧ್ರಪ್ರದೇಶ, ಗುಜರಾತ್, ರಾಜಸ್ಥಾನನಲ್ಲಿ ತಲಾ ಮೂವರು, ಚತ್ತೀಸಗಡ, ಹಿಮಾಚಲ ಪ್ರದೇಶ, ಜಾರ್ಖಂಡ್, ಕರ್ನಾಟಕ, ಕೇರಳ, ಪಂಜಾಬ್, ತೆಲಂಗಾಣ ರಾಜ್ಯದಲ್ಲಿ ಒಬ್ಬ ಸದಸ್ಯನ ಮೇಲೆ ಕಿಡ್ನಾಪ್ ಕೇಸ್ ದಾಖಲಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version