ದಿನದ ಸುದ್ದಿ

ಎಲ್ಲಾ ರೈತರಿಗೂ ‘ಕಿಸಾನ್​ ಸಮ್ಮಾನ್​’ ಯೋಜನೆ ವಿಸ್ತರಣೆ

Published

on

ಸುದ್ದಿದಿನ,ನವದೆಹಲಿ: ಮೊದಲ ಸಂಪುಟ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ರೈತರಿಗೆ ಬಂಪರ್​ ಗಿಫ್ಟ್​ ನೀಡಿದ್ದಾರೆ. ಚುನಾವಣೆಗೂ ಮೊದಲು ನಡೆದಿದ್ದ ಬಜೆಟ್​ನಲ್ಲಿ ಮೋದಿ ಸರ್ಕಾರ, ಸಣ್ಣ ರೈತರಿಗೆ(3 ಎಕರೆ ಒಳಗಿರುವ) ಪ್ರಧಾನಮಂತ್ರಿ ಕಿಸಾನ್​ ಸಮ್ಮಾನ್​ ಯೋಜನೆ ಅಡಿಯಲ್ಲಿ 3 ಕಂತುಗಳಲ್ಲಿ 2 ಸಾವಿರದಂತೆ ಒಟ್ಟು 6 ಸಾವಿರ ಹಣ ನೀಡುತ್ತಿತ್ತು. ಆದ್ರೆ ಶುಕ್ರವಾರ ಪ್ರಧಾನ ಮಂತ್ರಿ ಕಚೇರಿಯಲ್ಲಿ ನಡೆದ ಮೊದಲ ಸಂಪುಟ ಸಭೆಯಲ್ಲಿ ಪ್ರಧಾನಿ ಮೋದಿ, ಪ್ರಧಾನಮಂತ್ರಿ ಕಿಸಾನ್​ ಸಮ್ಮಾನ್​ ಯೋಜನೆಯನ್ನು ಎಲ್ಲಾ ವರ್ಗದ ರೈತರಿಗೂ ವಿಸ್ತರಿಸಿದ್ದಾರೆ.

ಹೀಗಾಗಿ ದೇಶದ ಎಲ್ಲಾ ರೈತರು ಈ ಯೋಜನೆಯ ಪ್ರಯೋಜನ ಪಡೆಯಬಹುದಾಗಿದೆ. ಪ್ರಧಾನಿ ಮೋದಿ ಸಂಪುಟದಲ್ಲಿ 58 ಜನ ಸಂಸದರು ಸಚಿವರುಗಳಾಗಿ ಪ್ರಮಾಣ ವಚನ ಸ್ವೀಕರಿಸಿದ್ರು. ಪ್ರಮಾಣ ವಚನ ಸ್ವೀಕರಿಸಿದ್ದ ಎಲ್ಲಾ ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡಲಾಯ್ತು. ಖಾತೆ ಹಂಚಿಕೆ ಬಳಿಕ ಇದೇ ಮೊದಲ ಬಾರಿಗೆ ಪ್ರಧಾನಿ ಮೋದಿ ತಮ್ಮ ಸಂಪುಟ ಸದಸ್ಯರೊಂದಿಗೆ ಸಭೆ ನಡೆಸಿದ್ರು. ಶುಕ್ರವಾರ ಸಂಜೆ 5 ಗಂಟೆಯಿಂದ ಪ್ರಧಾನ ಮಂತ್ರಿ ಕಚೇರಿಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version