ದಿನದ ಸುದ್ದಿ
ಕೊಡಗು ಜಿಲ್ಲೆಯಲ್ಲಿ ಇಂದು, ನಾಳೆ ಭಾರೀ ಮಳೆ – ಭೂಕುಸಿತ ಸಾಧ್ಯತೆ : ಜಾಗೃತೆವಹಿಸಲು ಜಿಲ್ಲಾಡಳಿತ ಮನವಿ
ಸುದ್ದಿದಿನ, ಕೊಡಗು : ಜಿಲ್ಲೆಯಲ್ಲಿ ಆಗಸ್ಟ್ 14 (ಇಂದು) ರ ರಾತ್ರಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದ್ದು, ಅತೀಯಾದ ಮಳೆಯಿಂದ ಬೆಟ್ಟ ಗುಡ್ಡ ಪ್ರದೇಶಗಳಲ್ಲಿ ದಿನಾಂಕ:14-08-2019 ರ ರಾತ್ರಿ ಹಾಗೂ 15-08-2019 ಬೆಳಿಗ್ಗೆ ಭೂ ಕುಸಿತ ಉಂಟಾಗುವ ಸಂಭವ ಇರುವುದರಿಂದ ಗುಡ್ಡಗಾಡು ಪ್ರದೇಶ, ಮತ್ತು ಬೆಟ್ಟದ ತಪ್ಪಲುಗಳಲ್ಲಿ ವಾಸ ಮಾಡುವ ಜನರು ಜಾಗೃತೆಯಿಂದ ಇರಲು ಜಿಲ್ಲಾಡಳಿತ ಮನವಿ ಮಾಡುತ್ತದೆ ಎಂದು ಕೊಡಗು ಜಿಲ್ಲಾಧಿಕಾರಿ ತಿಳಿಸಿದ್ದಾರೆ.