ದಿನದ ಸುದ್ದಿ

ಕೊಡಗು ಪ್ರವಾಹ : ಮೃತದೇಹಗಳ ಹೊರ ತೆಗೆಯಲು ಸವಾಲಾಗಿದೆ ಕೆಸರಿನ ರಾಶಿ

Published

on

ಸುದ್ದಿದಿನ ಡೆಸ್ಕ್ : ಕೊಡಗು ಜಿಲ್ಲೆಯಲ್ಲಿ ಪ್ರಕೃತಿ ವಿಕೋಪ ಹಿನ್ನೆಲ್ಲಿ ಇಂದೂ ಕೂಡ ಮುಂದುವರಿದಿದೆ ಶೋಧ ಕಾರ್ಯಾಚರಣೆ.

ಇನ್ನೂ ಐವರು ನಾಪತ್ತೆಯಾಗಿರುವ ಹಿನ್ನೆಲೆ.
ವಿವಿಧೆಡೆ ಪೊಲೀಸ್, ಸಿವಿಲ್ ಡಿಫೆನ್ಸ್ ಸಿಬ್ಬಂದಿ ಮತ್ತು ಸಾರ್ವಜನಿಕರಿಂದ ಶೋಧ ಕಾರ್ಯಾಚರಣೆ ಭರದಿದ ಸಾಗಿದೆ. ಮೃತದೇಹಗಳು ಹತ್ತಾರು ಅಡಿ ಮಣ್ಣಿನಾಳದಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು,ಕಬ್ಬಿಣದ ಸಲಾಕೆ ಚುಚ್ಚಿ ದೇಹ ಗುರುತಿಸಲು ಪ್ರಯತ್ನ ನಡೆದಿದೆ.

ಸ್ಥಳಕ್ಕೆ ಜೆಸಿಬಿ ಕೊಂಡೊಯ್ದು ಶೋಧ ನಡೆಸಲು ನಿರ್ಧರಿಸಿದ್ದು, ಜೆಸಿಬಿ ತೆರಳಲು ರಸ್ತೆ ಸಂಪರ್ಕ ಇಲ್ಲದೆ ಪರದಾಡುವಂತಾಗಿದೆ. ಸಂತ್ರಸ್ತರು ಸಾವನ್ನಪ್ಪಿ 12 ದಿನಗಳು ಕಳೆದು ಹೋಗಿರುವ ಹಿನ್ನೆಲೆ.ಮೃತ ದೇಹಗಳು ಕೊಳೆತು ಹೋಗಿರುವ ಸಾಧ್ಯತೆಯಿದ್ದು, ಶೋಧ ಸಿಬ್ಬಂದಿಗೆ ಸವಾಲಾಗಿದೆ ಕೆಸರಿನ ರಾಶಿ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version