ದಿನದ ಸುದ್ದಿ
ಶಾಕಿಂಗ್ : ಮುಂದುವರಿದ ಭೂ ಕುಸಿತ: 10 ಮಂದಿ ಸಾವನ್ನಪ್ಪಿರುವ ಶಂಕೆ
ಸುದ್ದಿದಿನ ಡೆಸ್ಕ್ : ಮಳೆಯಿಂದ ಅವಾಂತರ ಮತ್ತೆ ಮುಂದುವರಿದಿದ್ದು, 10 ಮಂದಿ ಮೃತಪಟ್ಟಿರುವ ಶಂಕೆ ಇದೆ.
ಕೊಡಗಿನಲ್ಲಿ ಮಳೆ ಅಬ್ಬರಕಡಿಮೆಯಾಗಿದೆ. ಆದರೆ, ಭೂಕುಸಿತ, ಗುಡ್ಡಕುಸಿತ ನಿಲ್ಲುತ್ತಿಲ್ಲ. ಮುಕ್ಕೋಡ್ಲು ಗ್ರಾಮದ ಅಕ್ಕಪಕ್ಕ ಗ್ರಾಮಗಳಲ್ಲಿ ಭೀಕರ ಗುಡ್ಡಕುಸಿತವಾಗಿದೆ, ಇದರಡಿಯಲ್ಲಿ 10 ಕ್ಕೂ ಹೆಚ್ಚು ಜನ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗುತ್ತಿದೆ.
ಮುಕ್ಕೋಡ್ಲು ಅಕ್ಕಪಕ್ಕದ ಗ್ರಾಮದ ಜನರೆಲ್ಲರೂ ಭಯದಿಂದ ಗ್ರಾಮಗಳನ್ನು ತೊರೆದು ಸುರಕ್ಷಿತ ಪ್ರದೇಶಗಳಿಗೆ ತೆರಳಿದ್ದಾರೆ ಎಂದು ತಿಳಿದು ಬಂದಿದೆ.
ಸಕಲೇಶಪುರದಲ್ಲಿ ಹತ್ತು ಮನೆ ನೆಲಸಮ
ಇನ್ನು ಸಕಲೇಶಪುರ ತಾಲೂಕಿನ ಅತ್ತಿಹಳ್ಳಿ, ಏರಗಹಳ್ಳಿ, ಹೊಂಗದಹಳ್ಳ, ಮಾಗೇರ ಗ್ರಾಮಗಳಲ್ಲಿ ಭೂಕುಸಿತವಾಗಿ ಹತ್ತಾರು ಮನೆಗಳು ನೆಲಸಮವಾಗಿವೆ, ಕಾಫಿ, ಭತ್ತ ಸೇರಿದಂತೆ ಎಲ್ಲ ಬೆಳೆಗಳು ಸಂಪೂರ್ಣ ಹಾನಿಯಾಗಿವೆ. ಯಾಡಕುಮರಿ ರೇಲ್ವೆ ಹಳಿ ಮೇಲೆ 10 ಕ್ಕೂ ಹೆಚ್ಚು ಕಡೆ ಗುಡ್ದಕುಸಿತವಾಗಿದೆ. ಇದರಿಂದ ಬೆಂಗಳೂರು- ಮಂಗಳೂರು ರೈಲು ಸಂಚಾರ ಅನಿರ್ದಿಷ್ಟಾವಧಿಗೆ ಸ್ಥಗಿತಗೊಳಿಸಲಾಗಿದೆ ಎಂದು ವರದಿಯಾಗಿದೆ.