ದಿನದ ಸುದ್ದಿ
ಕೊಡಗು ಪ್ರವಾಹ : ಭೀಕರ ಭೂಕುಸಿತ ; ಭೂ ವಿಜ್ಞಾನಿಗಳಿಂದ ವರದಿ ಬಿಡುಗಡೆ
ಸುದ್ದಿದಿನ ಡೆಸ್ಕ್ : ಕೊಡಗು ಜಿಲ್ಲೆಯಲ್ಲಿ ಭೀಕರ ಭೂ ಕುಸಿತ ವಿಚಾರ, ಭೂ ವಿಜ್ಞಾನಿಗಳಿಂದ 500 ಪುಟಗಳ ವರದಿ ಬಿಡುಗಡೆ ಮಾಡಿದೆ. ಭೂ ಕುಸಿತಕ್ಕೆ ಮಾನವ ನಿರ್ಮಿತ ಲೋಪಗಳೇ ಕಾರಣ. ಭಾರೀ ಮಳೆಯೂ ಭೂ ಕಂಪನಕ್ಕೆ ಕಾರಣ. ಬೆಟ್ಟಗಳ ಇಳಿಜಾರು ಪ್ರದೇಶಗಳಲ್ಲಿ ಭಾರೀ ಮಾರ್ಪಾಡಾಗಿದ್ದು, ಈ ಮಾರ್ಪಾಟಿನಿಂದ ನೀರಿನ ಹರಿವಿಕೆಗೆ ಅಡಚಣೆ ಉಂಟಾಗಿ ಇದರಿಂದಲೇ ಭೂ ಕುಸಿತ ಸಂಭವಿಸಿದೆ.
ಹಾಗೇ ರಸ್ತೆ, ಮನೆ, ರೆಸಾರ್ಟ್, ಹೋಟೆಲ್
ಹೋಂಸ್ಟೇಗಳ ನಿರ್ಮಾಣಕ್ಕೆ ಬೆಟ್ಟಗಳ ಅಗೆತ.
ಇದರಿಂದ ನೀರಿನ ಹರಿವಿಕೆಗೆ ಅಡ್ಡಿಯಾಗಿ
ಭೂಮಿಯೊಳಗಿನ ದೋಷಪೂರಿತ ವಲಯವೂ ಭೂ ಕುಸಿತಕ್ಕೆ ಕಾರಣವಾಗಿದೆ ಎಂದು ಭೂ ವಿಜ್ಞಾನಿಗಳ ತಂಡದ ವರದಿಯಲ್ಲಿ ಉಲ್ಲೇಖ ಮಾಡಿದೆ.
ಹೈದ್ರಾಬಾದಿನ ಜೀಯೋಲಾಜಿಕಲ್ ಸರ್ವೆ ಆಫ್ ಇಂಡಿಯ ವಿಜ್ಞಾನಿಗಳ ತಂಡವು ಸೆ.27 ರಂದು
ಕೊಡಗು ಜಿಲ್ಲಾಧಿಕಾರಿ ಶ್ರೀವಿದ್ಯಾಗೆ ವರದಿ ಸಲ್ಲಿಸಲಿದೆ. ಕೆಲವು ದಿನಗಳ ಹಿಂದೆ ಜಿಲ್ಲೆಗೆ ವಿಜ್ಞಾನಿಗಳ ತಂಡ ಭೇಟಿ ನೀಡಿತ್ತು. ಭವಿಷ್ಯದ ಅನಾಹುತ ತಡೆಗೆ ಹಲವು ಮಾರ್ಗಸೂಚಿ ಕೊಟ್ಟಿದ್ದು, ಭೂನಿರ್ಬಂಧನೆಯ ಕಟ್ಟುನಿಟ್ಟಿನ ಮಾರ್ಗಸೂಚಿ ರಚನೆಗೆ ಸೂಚನೆ ನೀಡಿದೆ. ರಸ್ತೆ,ಪಟ್ಟಣ, ಅಭಿವೃದ್ಧಿ ಯೋಜನೆ ಬದಲಾಯಿಸುವಂತೆ ಸಲಹೆ ಕೊಟ್ಟಿದೆ. ಹಾಗೆ ರಚನಾತ್ಮಕ ಎಂಜಿನಿಯರ್ ಗಳ ಸಲಹೆ ಪಡೆಯಲು ವರದಿಯಲ್ಲಿ ಸೂಚಿಸಲಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401