ದಿನದ ಸುದ್ದಿ
ಕೊಡಗು ಪ್ರವಾಹ | ಕೆ ಎಸ್ ಆರ್ ಟಿ ಸಿ ಪರೀಕ್ಷೆ ; ಡಿಸಿಗೆ ಮನವಿ ಮಾಡಿದ ವಿದ್ಯಾರ್ಥಿನಿ
ಸುದ್ದಿದಿನ ಡೆಸ್ಕ್ | ಕೊಡಗಿನಲ್ಲಿ ಭಾರೀ ಪ್ರವಾಹದ ಬಳಿಕ ವಿದ್ಯಾರ್ಥಿಗಳಿಗೆ ಸಂಕಷ್ಟ ಎದುರಾಗಿದೆ. ಕೆ ಎಸ್ ಆರ್ ಟಿಸಿ ಪರೀಕ್ಷೆ ಬರೆಯಲು ವಿದ್ಯಾರ್ಥಿನಿಗೆ ಸಂಕಷ್ಟ.25 ಮತ್ತು 26ರಂದು ನಡೆಯಲಿರುವ ಕೆ ಎಸ್ ಆರ್ ಟಿಸಿ ಪರೀಕ್ಷೆ.
ಕೆ ಎಸ್ ಆರ್ ಟಿಸಿ ಪರೀಕ್ಷೆ ಬರೆಯಲಿರುವ ಕೊಡಗಿನ ವಿದ್ಯಾರ್ಥಿನಿ ಸುವೀನಾಗೆ ಪ್ರವಾಹ ಹಿನ್ನೆಲೆಯಲ್ಲಿ ಆ ಭಾಗಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಸಂತ್ರಸ್ತರ ಪರಿಹಾರ ಕೇಂದ್ರದಲ್ಲಿ ದ.ಕ. ಜಿಲ್ಲಾಧಿಕಾರಿಯವರಲ್ಲಿ ಮನವಿ ಮಾಡಿಕೊಂಡ ವಿದ್ಯಾರ್ಥಿನಿ. ಕೆ ಎಸ್ ಆರ್ ಟಿಸಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿಕೊಡುವಂತೆ ಮನವಿ.
ಜಿಲ್ಲಾಧಿಕಾರಿಯವರು ಮನವಿಗೆ ಭರವಸೆ ನೀಡಿದ್ದಾರೆ. ಕೇವಲ ಭರವಸೆ ಬೇಡ ಪರೀಕ್ಷೆ ಬರೆಯಲು ಬೇಕಾದ ದಾಖಲಾತಿಯನ್ನು ಮಾಡಿಕೊಡಬೇಕು ಎಂದ ವಿದ್ಯಾರ್ಥಿನಿ.
ಸುದ್ದಿದಿನ.ಕಾಂ|ವಾಟ್ಸಾಪ್|9986715401