ದಿನದ ಸುದ್ದಿ

ಕೊಡಗು ಪ್ರವಾಹ | ರಾಜ್ಯ ಸರ್ಕಾರದಿಂದ 115 ಕೋಟಿ ರೂ ಬಿಡುಗಡೆ : ಸಚಿವ ಸಾ.ರಾ.ಮಹೇಶ್

Published

on

ಸುದ್ದಿದಿನ,ಕೊಡಗು : ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸರ್ಕಾರ ಅತಿವೃಷ್ಟಿಗೆ ಪ್ರಥಮ ಹಂತದಲ್ಲಿ 5 ಕೋಟಿ, 2ನೇ ಹಂತದಲ್ಲಿ 20 ಕೋಟಿ, 3 ನೇ ಹಂತದಲ್ಲಿ 85 ಕೋಟಿ ಒಟ್ಟು 115 ಕೋಟಿ ರೂವನ್ನು ಜಿಲ್ಲಾಧಿಕಾರಿ ಅವರ ಖಾತೆಗೆ ಬಿಡುಗಡೆ ಮಾಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಸಾ.ರಾ.ಮಹೇಶ್ ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಚಿವರು ಮುಖ್ಯಮಂತ್ರಿಯವರ ಆದೇಶದಂತೆ ಪ್ರವಾಸೋದ್ಯಮ ಇಲಾಖೆಯಿಂದ 25 ಕೋಟಿ ರೂ.ವನ್ನು ಜಿಲ್ಲೆಗೆ ಬಿಡುಗಡೆ ಮಾಡುತ್ತಿದ್ದೇನೆಂದು ಪ್ರವಾಸೋದ್ಯಮ ಸಚಿವರು ಆದ ಸಾ.ರಾ.ಮಹೇಶ್ ಅವರು ಪ್ರಕಟಿಸಿದರು.

ಅತಿವೃಷ್ಟಿಯಿಂದ ನಿರಾಶ್ರಿತರಾದ 1736 ಮಂದಿಗೆ ತಲಾ 3800 ರೂ ಪರಿಹಾರದ ಚೆಕ್ ನೀಡಲಾಗಿದೆ. ಇದುವರೆಗೆ ಪ್ರಕೃತಿ ವಿಕೋಪಕ್ಕೆ ತುತ್ತಾಗಿ 16 ಮಂದಿ ಮೃತ ಪಟ್ಟಿದ್ದು, 14 ಮಂದಿ ಕುಟುಂಬದವರಿಗೆ ಪರಿಹಾರದ ಚೆಕ್ ವಿತರಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಮಾಹಿತಿ ನೀಡಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version