ದಿನದ ಸುದ್ದಿ
ಕೊಡಗು ಪ್ರವಾಹ : ಸಂತ್ರಸ್ತರಿಗೆ ಗೃಹ ಬಳಕೆ ವಸ್ತುಗಳ ಕಿಟ್ ವಿತರಣೆ
ಸುದ್ದಿದಿನ,ಮಡಿಕೇರಿ : ಪ್ರಕೃತಿ ವಿಕೋಪದಿಂದ ನಿರಾಶ್ರಿತರಾದ ಸಂತ್ರಸ್ತ 100 ಕುಟುಂಬಗಳಿಗೆ ವಸಾಯಿ ತಾಲ್ಲೂಕು ಹೊಟೇಲ್ ಅಸೋಷಿಯೇಷನ್ ಮುಂಬೈ ಮತ್ತು ವಿ.ಕೆ. ಕಂಪನಿ ವತಿಯಿಂದ ನಗರದ ಕೋಟೆ ಆವರಣದಲ್ಲಿರುವ ಪರಿಹಾರ ಕೇಂದ್ರದಲ್ಲಿ ಗೃಹ ಬಳಕೆ ವಸ್ತುಗಳಾದ ಗ್ಯಾಸ್ ಸ್ಟೌವ್, ಮಿಕ್ಸಿ ಹಾಗೂ ಪಾತ್ರೆಗಳ ಕಿಟ್‍ಗಳನ್ನು ಶುಕ್ರವಾರ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ನೂರುನ್ನಿಸ, ತರಬೇತಿ ನ್ಯಾಯಾಧೀಶರಾದ ಮಹಾಲಕ್ಷ್ಮೀ, ಮಲ್ಲಿಕಾರ್ಜುನ, ವಸಾಯಿ ತಾಲ್ಲೂಕು ಹೊಟೇಲ್ ಅಸೋಷಿಯಶನ್ ಅಧ್ಯಕ್ಷರಾದ ಪ್ರಕಾಶ ಹೆಗಡೆ, ಶಂಕರ ಶೆಟ್ಟಿ, ನಾಗರಾಜ ಶೆಟ್ಟಿ, ರಾಧಾಕೃಷ್ಣ ಶೆಟ್ಟಿ, ಸುಜಿತ್ ರೈ, ಕಾನೂನು ಸೇವಾ ಪ್ರಾಧಿಕಾರದ ಆಡಳಿತ ಸಹಾಯಕರಾದ ಬಿ.ಎಸ್.ಜಯಪ್ಪ ಇತರರು ಇದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401