ದಿನದ ಸುದ್ದಿ

ಶಿವಮೊಗ್ಗ | ಕೋಟೆ ಮಾರಿಕಾಂಬೆಯ ಮಡಿಲಲ್ಲಿ ಅಪ್ಪು..! ಅಭಿಮಾನಿಗಳ ಪ್ರೀತಿಯ ತಡೆಯೋರುಂಟೆ..?

Published

on

ಸುದ್ದಿದಿನ,ಶಿವಮೊಗ್ಗ: ನಗರದಲ್ಲಿ ಎರಡು ವರ್ಷಗಳಿಗೊಮ್ಮೆ ನಡೆಯುವ ಇತಿಹಾಸ ಪ್ರಸಿದ್ಧ ಕೋಟೆ ಶ್ರೀ ಮಾರಿಕಾಂಬ ಜಾತ್ರೆಗೆ ಪೌರಾಣಿಕ ಹಾಗೂ ಐತಿಹಾಸಿಕ ಹಿನ್ನೆಲೆಯಿದೆ. ಜಾತ್ರೆ ಅದ್ಧೂರಿಯಾಗಿ ನಡೆಯುತ್ತಿದೆ.

ಜಾತ್ರೆಯ ವೇಳೆ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿಮಾನಿಗಳು ಅವರ ಭಾವಚಿತ್ರವನ್ನು ಕೋಟೆ ಮಾರಿಕಾಂಬೆಯ ಮಡಿಲಲ್ಲಿ ಇಟ್ಟು ಪೂಜೆ ಸಲ್ಲಿಸುವುದರ ಮೂಲಕ ಸ್ಮರಿಸಿದ್ದಾರೆ.

ಅಪ್ಪು ಅಗಲಿದ ದಿನದಿಂದಲೂ ಅವರ ಅಭಿಮಾನಿಗಳು ಒಂದಲ್ಲೊಂದು ರೀತಿಯಲ್ಲಿ ಅವರನ್ನು ನೆನೆಯುವ ಮೂಲಕ ಅಭಿಮಾನವನ್ನು ತೋರುತ್ತಿದ್ದಾರೆ. ಇದೀಗ ಕೋಟೆ ಮಾರಿಕಾಂಬೆಯ ಮಡಿಲಲ್ಲಿ ಅಪ್ಪು ಪೋಟೋ ಇಟ್ಟು ಪೂಜೆ ಮಾಡಿದ್ದಾರೆ.

ಮಾರ್ಚ್​ 22ರಂದು ನಗರದ ಗಾಂಧಿ ಬಜಾರ್​ನಲ್ಲಿ​ ಧಾರ್ಮಿಕ ವಿಧಿವಿಧಾನಗಳೊಂದಿಗೆ ಇತಿಹಾಸ ಪ್ರಸಿದ್ಧ ಕೋಟೆ ಶ್ರೀ ಮಾರಿಕಾಂಬ ಜಾತ್ರೆಗೆ ಚಾಲನೆ ನೀಡಲಾಗಿದೆ. ಈ ಜಾತ್ರೆ ಐದು ದಿನಗಳ ಕಾಲ ವೈಭವದಿಂದ ನಡೆಯಲಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version