ಸಿನಿ ಸುದ್ದಿ

ವಿಡಿಯೋ | ಮೂರು ಮಿಲಿಯನ್ ವೀವ್ಸ್ ದಾಟಿ ಮುನ್ನುಗ್ಗುತ್ತಿದೆ ಕಿಚ್ಚನ ‘ಪಟಾಕಿ ಪೋರಿಯೋ’ ಹಾಡು..!

Published

on

ಸುದ್ದಿದಿನ ಡೆಸ್ಕ್ : ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ಸಿನೆಮಾ ‘ಕೋಟಿಗೊಬ್ಬ -3’. ಈ ಸಿನೆಮಾದ ಲಿರಿಕಲ್ ಹಾಡು ‘ಪಟಾಕಿ ಪೋರಿಯೊ’ ಇತ್ತೀಚೆಗಷ್ಟೆ ಬಿಡುಗಡೆಯಾಗಿದ್ದು, ಮೂರು ಮಿಲಿಯನ್ ವೀವ್ಸ್ ಕಂಡಿದೆ.

ಪಟಾಕಿ ಪೋರಿಯೋ ಹಾಡಿನಲ್ಲಿ ಆಶಿಕ ರಂಗನಾಥ್ ಕಿಚ್ಚನಿಗೆ ಜೊತೆಯಾಗಿದ್ದು, ಸಿನೆಮಾಕ್ಕೆ ಶಿವ ಕಾರ್ತಿಕ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಸಂಗೀತ ಮಾಂತ್ರಿಕ ಅರ್ಜುನ್ ಜನ್ಯ ಹಾಡುಗಳಿಗೆ ರಾಗ ಸಂಯೋಜಿಸಿದ್ದು, ಅನೂಪ್ ಬಂಢಾರಿ ಪಟಾಕಿ ಪೋರಿಯೋ ಹಾಡನ್ನು ಬರೆದಿದ್ದಾರೆ. ಸೂರಪ್ಪ ಬಾಬು ಸಿನೆಮಾಕ್ಕೆ ಹಣ ಹೂಡಿದ್ದಾರೆ.

ಲಾಕ್ ಡೌನ್ ಹಿನ್ನೆಲೆ ಸಿನೆಮಾ ರಿಲೀಸ್ ಡೇಟ್ ಮುಂದಕ್ಕೆ ಹೋಗಿದ್ದು, ಅತಿ ಶೀಘ್ರದಲ್ಲಿ ಕೋಟಿಗೊಬ್ಬ-3 ಸಿನೆಮಾ ಥಿಯೇಟರ್ ನಲ್ಲಿ ಸದ್ದು ಮಾಡಲಿದೆ.

ಹಾಡು ನೋಡಿ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version