ದಿನದ ಸುದ್ದಿ

ಸುಬಿಕ್ಷಾ ಪೌಂಡೇಶನ್ ನಿಂದ ಕೊವಿಡ್ 19 ಜಾಗೃತಿ ಅಭಿಯಾನ : ಎಸ್ಪಿ‌ ಹನುಮಂತರಾಯ ಉದ್ಘಾಟನೆ

Published

on

ಸುದ್ದಿದಿನ,ದಾವಣಗೆರೆ : ಸುಬಿಕ್ಷಾ ಪೌಂಡೇಶನ್ ವತಿಯಿಂದ ಕೊವಿಡ್ 19 ಜಾಗೃತಿ ಅಭಿಯಾನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಎಸ್ ಪಿ ಹನುಮಂತ ರಾಯ ಉದ್ಘಾಟಿಸಿದರು‌. ಎಸ್ಪಿ ಹನುಮಂತರಾಯ ಸಸಿಗೆ ನೀರು ಎರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು‌.

ತಾಲ್ಲೂಕು ರೈತ ಭವನದ ಬಳಿ ತರಕಾರಿ ಮಾರುಕಟ್ಟೆ ಆವರಣದಲ್ಲಿ ಹಮ್ಮಿಕೊಂಡಿದ್ದ ಜಾಗೃತಿ ಅಭಿಯಾನದಲ್ಲಿ 500 ಕ್ಕ ಹೆಚ್ಚು ಜನರಿಗೆ ಮಾಸ್ಕ್ ವಿತರಿಸಲಾಯಿತು. ಎಸ್ಪಿ ಮಾರುಕಟ್ಟೆಗೆ ಮಾಸ್ಕ್ ಇಲ್ಲದ ಬಂದ ಗ್ರಾಹಕರಿಗೆ ವ್ಯಾಪಾರಿಗಳಿಗೆ ಮಾಸ್ಕ್ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಹನುಮಂತರಾಯ ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿದೆ , ಎರಡನೇ ಅಲೆ ವೇಗವಾಗಿ ಹರಡುತ್ತಿದೆ.ಆರೋಗ್ಯ ವಿಚಾರದಲ್ಲಿ ಮರೆವು ಇರಬಾರದು , ಮಾಸ್ಕ್ ಹಾಕಿಕೊಂಡು ಬರದಿದ್ದರೆ ದಂಡ ಕಟ್ಟಬೇಕಾಗುತ್ತದೆ ಎಂದು ಎಚ್ಚರಿಸಿದರು.

ಎಸ್ಪಿ ಜೊತೆ ಸಂಸ್ಥೆ ಕಾರ್ಯದರ್ಶಿ , ಸೌಮ್ಯ ಮಂಜುನಾಥ್ ಜಾಧವ್ , ಶ್ರೀಮತಿ ಆಶಾ ಮರಿಯೋಜಿರಾವ್ , ಭಾಗ್ಯ ಪಿಸಾಳೆ , ಶ್ವೇತಾ ಸೋಮಶೇಖರ್ ಇತರ ಪದಾಧಿಕಾರಿಗಳು ಭಾಗವಹಿಸಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version