ದಿನದ ಸುದ್ದಿ

ಕುಂದುವಾಡ ಪ್ರೀಮಿಯರ್ ಲೀಗ್ -4 ಕ್ರಿಕೆಟ್ ಟೂರ್ನಿಮೆಂಟ್ : ಶ್ಲಾಘಿಸಿದ ಜಿಲ್ಲಾಧಿಕಾರಿ

Published

on

ಸುದ್ದಿದಿನ,ದಾವಣಗೆರೆ: ಎಲ್ಲರಲ್ಲು ಸ್ನೇಹ ಬೆಳೆಸುವ ಉದ್ದೇಶದಿಂದ ಪ್ರತಿ ವರ್ಷ ಕ್ರೀಡೆ ನಡೆಸುತ್ತಿರುವ ಕುಂದುವಾಡ ಯುವಕರ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಬಣ್ಣಿಸಿದರು.

ನಗರದ ಹಳೇ ಕುಂದುವಾಡದಲ್ಲಿ ಮನಾ ಯುವ ಬ್ರಿಗೇಡ್, ಜರವೇ ಯಿಂದ ಮೂರು ದಿನಗಳ ಕಾಲ ಆಯೋಜಿಸಿದ್ದ ಕುಂದುವಾಡ ಪ್ರೀಮಿಯರ್ ಲೀಗ್ -4 ಕ್ರಿಕೆಟ್ ಟೂರ್ನಿಮೆಂಟ್ ನ್ನು ಬ್ಯಾಟಿಂಗ್ ಮಾಡುವ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮಗಳ ಯುವಕರಲ್ಲಿ ಸಣ್ಣಪುಟ್ಟ ಗಲಾಟೆಗಳು ಇರುತ್ತವೆ, ಕ್ರಿಕೆಟ್ ನಲ್ಲಿ ಎಲ್ಲಾ ಯುವಕರನ್ನು ಒಗ್ಗೂಡಿಸುವ ಮೂಲಕ ಐಪಿಎಲ್ ಮಾದರಿಯಲ್ಲಿ ತುಂಬಾ ಅಚ್ಚುಕಟ್ಟಾಗಿ ಮನಾ ಯುವ ಬ್ರಿಗೇಡ್ ವೇದಿಕೆಯವರು ಕ್ರಿಕೆಟ್ ಆಯೋಜನೆ ಮಾಡಿರುವುದು ಉತ್ತಮ ಉಪಾಯ ಎಂದು ಹೇಳಿದರು.

ಇದೇ ವೇಳೆ ಹಳೇ ಕುಂದುವಾಡ ಸಮೀಪದ ರಾಷ್ಟ್ರೀಯ ಹೆದ್ದಾರಿ -4 ರಲ್ಲಿ ಬ್ರಿಡ್ಜ್ ನಿರ್ಮಿಸಿಕೊಡುವಂತೆ ಮನಾ ಯುವ ಬ್ರಿಗೇಡ್ ನಿಂದ ಮನವಿ ಸಲ್ಲಿಸಲಾಯಿತು.

ಇದನ್ನೂ ಓದಿ | ಮಹಾತ್ಮ ಗಾಂಧಿ ಕುರಿತು ಅವಹೇಳನ ಕಾರಿ ಟ್ವೀಟ್ ಮಾಡಿದ ನಟಿ ಕಂಗನಾ

ಮಹಾಪೌರರಾದ ಎಸ್ ಟಿ ವೀರೇಶ್ ಮಾತನಾಡಿ, ಕ್ರಿಕೆಟ್ ಆಟ ದೈಹಿಕವಾಗಿ ಸಹಾಯವಾಗುತ್ತೆ, ಅದರ ಜೊತೆಯಲ್ಲಿ ಸ್ನೇಹತ್ವಕ್ಕಾಗಿ ಈ ಟೂರ್ನಿ ನಡೆಸುತ್ತಿರುವುದು ನಿಜಕ್ಕೂ ಖುಷಿಯ ವಿಚಾರ, ಇದೇ ರೀತಿ ಊರಿನ ಎಲ್ಲಾ ಅಭಿವೃದ್ದಿ ಕೆಲಸಗಳಿಗೆ ಎಲ್ಲಾ ಯುವಕರು ಕೈಜೋಡಿಸಬೇಕು ಎಂದು ಕಿವಿಮಾತು ಹೇಳಿದರು.

ಈ ಸಂದರ್ಭದಲ್ಲಿ ವರ್ತಕರಾದ ರಾಘವೇಂದ್ರ ಎನ್ ದಿವಾಕರ್, ಮುಖಂಡರಾದ ಹನುಮಂತಪ್ಪ, ಶಿವಪ್ಪ, ಪತ್ರಕರ್ತರಾದ ಮಧುನಾಗರಾಜ್ ಕುಂದುವಾಡ, ರಾಜೂ ಕರೂರು, ನಾಗರಾಜ್ ಎಸ್ ಬಿ, ಅಣ್ಣಪ್ಪ, ಮನಾ ಯುವ ಬ್ರಿಗೇಡ್ ಸದಸ್ಯರು ಸೇರಿದಂತೆ ಮತ್ತಿತರರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version