ದಿನದ ಸುದ್ದಿ
ನೃತ್ಯ ಕಲಾವಿದೆ ಶೋಭಾ ಲೋಲನಾಥ್ ಅವರಿಗೆ ಕುವೆಂಪು ಕನ್ನಡ ರತ್ನ ಪ್ರಶಸ್ತಿ ಪ್ರದಾನ
ಸುದ್ದಿದಿನ,ಬೆಂಗಳೂರು: ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ರಾಷ್ಟ್ರಕವಿ ಕುವೆಂಪು ಅವರ 117ನೇ ಜಯಂತಿ, ಕುವೆಂಪು ಸಾಂಸ್ಕೃತಿಕ ಉತ್ಸವ ಹಾಗೂ ಕುವೆಂಪು ಅವರ ಶ್ರೀರಕ್ಷಾ ಮಂತ್ರ ಮಾಂಗಲ್ಯ ಪ್ರಶಸ್ತಿ ಪ್ರದಾನ ಸಮಾರಂಭದ ಪ್ರಯುಕ್ತ ವಿಶ್ವ ಮಾನವ ಕಲಾನಿಕೇತನ ಸಂಸ್ಥೆಯು ಕೊಡಮಾಡುವ ‘ಕುವೆಂಪು ಕನ್ನಡ ರತ್ನ‘ ಪ್ರಶಸ್ತಿಯನ್ನು ಶೋಭಾ ಲೋಲನಾಥ್ ಗೆ ನೀಡಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ಗಣ್ಯರ ಸಮ್ಮುಖದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೆಂಗಳೂರು ನಗರದ ನಿವಾಸಿಯಾದ ನೃತ್ಯ ಕಲಾವಿದೆಯಾದ ಶೋಭಾ ಲೋಲನಾಥ್ ಅವರ ಕನ್ನಡ ನಾಡು ನುಡಿ, ಸಂಸ್ಕೃತಿ ಹಾಗೂ ಕಳೆದ ಇಪ್ಪತ್ತು ವರ್ಷಗಳ ಕಾಲ ನೃತ್ಯ, ಕಲೆ ರಂಗದಲ್ಲಿ ಅನುಪಮ ಸೇವೆಯನ್ನು ಸಲ್ಲಿಸಿದಕ್ಕಾಗಿ ಈ ಪ್ರಶಸ್ತಿ ಲಭಿಸಿದೆ.
ಈ ಬಗ್ಗೆ ನಗರದ ಶೋಭಾ ಲೋಲನಾಥ್ ಅವರು ಕಳೆದ ಇಪ್ಪತ್ತು ವರ್ಷಗಳ ಕಾಲ ನೃತ್ಯ, ಕಲೆ ರಂಗದಲ್ಲಿ ಅನುಪಮ ಸೇವೆಯಲ್ಲಿ ನೀಡಿದ ಕೊಡುಗೆಗೆ ಪ್ರಶಸ್ತಿ ಸಂದಿದೆ. ಇವರ ಅಭಿಮಾನಿಗಳು, ನೃತ್ಯ ಕಲಾವಿದರು, ವಿದ್ಯಾರ್ಥಿ ಬಳಗದವರು ಮತ್ತು ಕುಟುಂಬ ವರ್ಗದವರು ಸಂತಸ ವ್ಯಕ್ತಪಡಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243