ದಿನದ ಸುದ್ದಿ
ರುಜುವಾನ್ ಕೆ ಅವರಿಗೆ ಕುವೆಂಪು ನುಡಿಸಿರಿ ರಾಜ್ಯಪ್ರಶಸ್ತಿ
ಸುದ್ದಿದಿನ ಡೆಸ್ಕ್ : ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕಿನ ಅಂದನೂರು ಗ್ರಾಮದ ಶ್ರೀ ಕಲಂದರ್ ಸಾಬ್ ಮತ್ತು ಶಂಷದ್ ಭೀ ದಂಪತಿಯ ಕಿರಿಯ ಪುತ್ರನಾದ ರುಜುವಾನ್ ಕೆ ಅವರು ಪ್ರಸ್ತುತ ದಾವಣಗೆರೆ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ವಿಭಾಗದಲ್ಲಿ ಪಿಎಚ್ ಡಿ ಸಂಶೋಧನಾರ್ಥಿಯಾಗಿದ್ದಾರೆ.
ಇವರ ಸಾಹಿತ್ಯ ಸೇವೆಯನ್ನು ಗುರುತಿಸಿ ಚೇತನ ಫೌಂಡೇಷನ್ ಅವರು ದಿನಾಂಕ 24-04-2022 ರಂದು ಬೆಂಗಳೂರನ ಕನ್ನಡ ಸಾಹಿತ್ಯ ಪರಿಷತ್ತಿನ ಅಕ್ಕ ಮಹಾದೇವಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ, ಅಖಿಲ ಕರ್ನಾಟಕ ನಾಲ್ಕನೇ ಚೇತನ ಸಾಹಿತ್ಯ ಸಮ್ಮೇಳನದಲ್ಲಿ ಪ್ರಸ್ತಕ ಸಾಲಿನ “ಕುವೆಂಪು ನುಡಿಸಿರಿ” ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಗಿದೆ ಎಂದು ಚೇತನ ಫೌಂಡೇಷನ್ ಕರ್ನಾಟಕದ ಅಧ್ಯಕ್ಷರಾದ ಚಂದ್ರಶೇಖರ ಮಾಡಲಗೇರಿಯವರು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243