ದಿನದ ಸುದ್ದಿ
ಶ್ರೀಮತಿ ಲಕ್ಷ್ಮಿದೇವಿ ಅವರಿಗೆ ಏ. 21 ರಂದು ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರದಾನ
ಸುದ್ದಿದಿನ, ದಾವಣಗೆರೆ : ಕರ್ನಾಟಕ ಸರ್ಕಾರದ ನಿರ್ದೇಶನದಂತೆ ಅತ್ಯುತ್ತಮ ಸೇವೆ ಸಲ್ಲಿಸಿದ ಅಥವಾ ಸಾಧನೆಗೈದ ಅಧಿಕಾರಿಗಳಿಗೆ ನೀಡಲಾಗುವ ಜಿಲ್ಲಾ ಮಟ್ಟದ ಅತ್ತ್ಯುತ್ತಮ ಸೇವಾ ಪ್ರಶಸ್ತಿಗೆ ದಾವಣಗೆರೆ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಶೀಘ್ರ ಲಿಪಿಗಾರರಾದ ಶ್ರೀಮತಿ ಹೆಚ್.ಆರ್ . ಲಕ್ಷ್ಮಿದೇವಿ ಅವರು ಆಯ್ಕೆಯಾಗಿದ್ದಾರೆ.
2022 ರ ಸಾಲಿನ ಈ ಪ್ರಶಸ್ತಿಗೆ ಭಾಜನರಾಗಿರುವ ಶ್ರೀಮತಿ ಲಕ್ಷ್ಮಿದೇವಿ ಅವರಿಗೆ ದಿನಾಂಕ : 21.04.2022 ರ ಮಧ್ಯಾಹ್ನ 12.30 ಕ್ಕೆ ದಾವಣಗೆರೆ ಜಿಲ್ಲಾಡಳಿತ ವತಿಯಿಂದ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243