ದಿನದ ಸುದ್ದಿ
ಯುವಕನ ಮೇಲೆ ಚಿರತೆ ದಾಳಿ..!
ಸುದ್ದಿದಿನ ಡೆಸ್ಕ್ : ಕೃಷ್ಣರಾಜಪೇಟೆ ತಾಲ್ಲೂಕಿನ ರಾಯಸಮುದ್ರ ಗ್ರಾಮದ ನಾರಾಯಣದುರ್ಗದ ಅಂಕನಾಥಪುರ ಸರಹದ್ದಿನಲ್ಲಿ ದನಗಳನ್ನು ಮೇಯಿಸುತ್ತಿದ್ದ ಯುವಕನ ಮೇಲೆ ಚಿರತೆ ದಾಳಿ ನಡೆಸಿರುವ ಘಟನರ ನಡೆದಿದೆ.
ರಾಯಸಮುದ್ರ ಗ್ರಾಮದ ಮಹೇಶ್ ಅವರ ಪುತ್ರ ವಿಜಯ್(20) ಚಿರತೆಯಿಂದ ದಾಳಿಗೊಳಗಾಗಿರುವ ಯುವಕನಾಗಿದ್ದು, ಬಲಗೈಯನ್ನು ಕಚ್ಚಿ, ಬೆನ್ನನ್ನು ಪರಚಿ ಚಿರತೆ ಗಾಯಗೊಳಿಸಿದೆ. ಸಾಕು ನಾಯಿಗಳ ಸದ್ದು ಹಾಗೂ ದಾಳಿಗೆ ಪ್ರಾಣಾಯಾಮ ಮಾಡದೇ ಪರಾರಿಯಾದ ಚಿರತೆ, ಕಳೆದ ಒಂದು ವಾರದಿಂದ ಸಾಕು ಪ್ರಾಣಿಗಳನ್ನು ತಿಂದು ಭಯ ಮೂಡಿಸಿದ್ದ ಚಿರತೆ ಇಂದು ಯುವಕನ ಮೇಲೆ ದಾಳಿ ಮಾಡಿರುವುದು ಗ್ರಾಮಸ್ಥರನ್ನು ಭಯ ಭೀತರನ್ನಾಗಿಸಿದೆ.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಯುವಕನ ರವಾನೆ ಮಾಡಲಾಗಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ. ಈ ಸಂದರ್ಭದಲ್ಲಿ ಬೋನನ್ನು ಇಟ್ಟು ಚಿರತೆ ಹಿಡುಯಲು ಕ್ರಮಕೈಗೊಳ್ಳುವುದಾಗಿ ತಿಳಿಸಿದ ಅರಣ್ಯ ಇಲಾಖೆಯ ಸಿಬ್ಬಂಧಿಗಳನ್ನುಗ್ರಾ.ಪಂ ಸದಸ್ಯ ದೇವಾನಂದ ಮತ್ತು ಗ್ರಾಮಸ್ಥರು ಸೇರಿ ತರಾಟೆಗೆ ತೆಗೆದುಕೊಂಡರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401