ದಿನದ ಸುದ್ದಿ
ಲಾಕ್ ಡೌನ್ | ತಂದೆಗೆ ಕ್ಯಾನ್ಸರ್ ; ಮೆಡಿಸಿನ್ ತರಿಸಿಕೊಡಿ ಎಂದು ಸಿಎಂಗೆ ನೊಂದ ಯುವತಿ ಮನವಿ
ಸುದ್ದಿದಿನ,ದಾವಣಗೆರೆ: ಹೊನ್ನಾಳಿ ತಾಲೂಕಿನ ಮಲೆಕುಂಬಳೂರು ಗ್ರಾಮದ ನಿಖಿತಾ ಎಂಬ ಯುವತಿಯು, ತಮ್ಮ ತಂದೆಯ ಚಿಕಿತ್ಸೆಗೆ ಮೆಡಿಸಿನ್ ಸಿಗದಿರುವುದಕ್ಕೆ ಆತಂಕಕ್ಕೆ ಒಳಗಾಗಿದ್ದು, ತಂದೆಯ ಚಿಕಿತ್ಸೆಗೆ ಔಷಧಿಯನ್ನು ಪೂರೈಸುವಂತೆ ಸಿಎಂ ಯಡಿಯೂರಪ್ಪ ಅವರಿಗೆ ವಿಡಿಯೋ ಮೂಲಕ ಮನವಿ ಮಾಡಿದ್ದಾರೆ.
ತಂದೆ ಹನುಮಂತಪ್ಪ ರಿಗೆ ಪ್ಯಾಂಕ್ರಿಯಾಸ್ ಕ್ಯಾನ್ಸರ್ ಬಂದಿದ್ದು, ಉಡುಪಿಯ ಮಣಿಪಾಲ್ ಆಸ್ಪತ್ರೆಯಲ್ಲಿ ಡಿಸೆಂಬರ್ 25 ಕ್ಕೆ ಎಲ್ಯೂ 177 ಡೋಟಾಟೆ ಥೆರಪಿ ಮಾಡಿಸಲಾಗಿದೆ. ಎರಡನೇ ಥೆರೆಫಿ ಮಾರ್ಚ್ 25 ಕ್ಕೆ ಮಾಡಿಸಬೇಕಿತ್ತು. ಆದ್ರೆ ಲಾಕ್ ಡೌನ್ ಹಿನ್ನಲೆ ಮುಂಬೈನಿಂದ ಬರಬೇಕಿದ್ದ ಮೆಡಿಸಿನ್ ಸಿಗುತ್ತಿಲ್ಲ ಅಂತ ವೈದ್ಯರು ತಿಳಿಸಿದ್ದಾರಂತೆ.
ನೋವಿನಿಂದ ನರಳಾಡುತ್ತಿರುವ ತಂದೆಯನ್ನು ನೋಡಿ ಮರುಕಪಡುತ್ತಿರುವ ಮಗಳು, ದಯವಿಟ್ಟು ಮೆಡಿಸಿನ್ ತರಿಸಲು ಸಹಾಯ ಮಾಡಿ ಎಂದು ಖುದ್ದು ಸಿಎಂ ಬಿಎಸ್ ಯಡಿಯೂರಪ್ಪಗೆ ಮನವಿ ಮಾಡಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243