ದಿನದ ಸುದ್ದಿ

ನವಿಲೇಹಾಳ್ ಗ್ರಾಮ ಪಂಚಾಯಿತಿ ವ್ಯಾಪ್ತಿ ಗ್ರಾಮಗಳಲ್ಲಿ ನಾಳೆಯಿಂದ ಮೇ 22 ರ ವರೆಗೆ ‘ಸಂಪೂರ್ಣ ಲಾಕ್ ಡೌನ್’

Published

on

ಸುದ್ದಿದಿನ, ದಾವಣಗೆರೆ-ಚನ್ನಗಿರಿ : ನವಿಲೇಹಾಳ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಕೊರೋನಾ ಹರಡದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮೇ20ರ (ನಾಳೆ, ಗುರುವಾರದಿಂದ) ಮೇ22ರವರೆಗೆ ಯಾವುದೇ ರೀತಿಯ ಅರ್ಥಿಕ ಚಟುವಟಿಕೆಗಳು ಹಾಗೂ ಅನಗತ್ಯವಾಗಿ ಸಾರ್ವಜನಿಕರು ಓಡಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಿ ಸಂಪೂರ್ಣ ಲಾಕ್ ಡೌನ್ ವಿಧಿಸಲಾಗಿದೆ ಎಂದು ಪಂಚಾಯಿತಿ ಕಾರ್ಯಾಲಯವು ಪ್ರಕಟಣೆಯಲ್ಲಿ ತಿಳಿಸಿದೆ.

ಮೇ 20 ಗುರುವಾರ ಬೆಳಿಗ್ಗೆ 6.00 ರಿಂದ 10.00 ಗಂಟೆವರೆಗೆ ಅಗತ್ಯ ವಸ್ತುಗಳನ್ನು ಕೋಳ್ಳಲು ಅವಕಾಶವಿದ್ದು ತದನಂತರ ಸಾರ್ವಜನಿಕರು ಅನಗತ್ಯವಾಗಿ ಓಡಾಡುವಂತಿರುವುದಿಲ್ಲ. ಈ ಸಾರ್ವಜನಿಕರು ಸಹಕರಿಸಲು ಮನವಿಮಾಡಲಾಗಿದೆ.

ಇದನ್ನೂ ಓದಿ | ಲಸಿಕೋತ್ಸವ ಮರೆತುಬಿಡಿ ; ನೀತಿಯೇ ನಿಷ್ಪ್ರಯೋಜಕವಾಗಿದೆ

ಒಂದು ವೇಳೆ ನಿಯಮ ಮೀರಿ ಅಂಗಡಿ ತೆರೆದು ವ್ಯಾಪಾರ ಮಾಡಿದವರ ಮೇಲೆ ದೂರು ದಾಖಲಿಸಲಾಗುವುದು. ಇದನ್ನು ಮೀರಿದ್ದಲ್ಲಿ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಲಾಗುವುದು ಎಂದು ಎಚ್ಚರಿಕೆಯನ್ನೂ ಪ್ರಕಟಣೆಯಲ್ಲಿ ನೀಡಲಾಗಿದೆ.

ಸುದ್ದಿದಿನ ಕಾಂ|ವಾಟ್ಸಾಪ್|9980346243

Trending

Exit mobile version