ರಾಜಕೀಯ

ರಾಮನಗರ ಲೋಕ ಸಭೆ ಉಪ‌ಚುನಾವಣೆ : ಬಿಜೆಪಿಗೆ ದಲಿತ ಸಂಘಟನೆಗಳಿಂದ ಬೆಂಬಲವಿಲ್ಲ

Published

on

ಸುದ್ದಿದಿನ ಡೆಸ್ಕ್ : ರಾಮನಗರ ಉಪ ಚುನಾವಣೆ ಹಿನ್ನೆಲೆ ಜಿಲ್ಲಾ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಹಾಗೂ ದಲಿತ ಸಂಘಟನೆಗಳ ಖಾಸಗಿ ಹೋಟೆಲ್ ಒಂದರಲ್ಲಿ ಸುದ್ದಿಗೋಷ್ಟಿ ನಡೆಸಿದವು. ಕಳೆದ ಎರಡು ದಿನಗಳ ಹಿಂದೆ ದಲಿತ ಸಂಘಟನೆಗಳು ಬಿಜೆಪಿಗೆ ಬೆಂಬಲ ಎಂಬ ಹೇಳಿಕೆ ವಿಚಾರ ಯಾವ ದಲಿತ ಸಂಘಟನೆಗಳು ಬಿಜೆಪಿ ಪಕ್ಷಕ್ಕೆ ಬೆಂಬಲ ಕೊಡೋದಿಲ್ಲ. ಬಿಜೆಪಿಗೆ ಬೆಂಬಲ ಕೊಡ್ತೀವಿ ಅಂದವರು ಈ ಕ್ಷೇತ್ರದ ಮತದಾರರಲ್ಲ. ಸಂವಿಧಾನ ಉಳಿವುಗಾಗಿ ಈ ಮೈತ್ರಿ ಮಾಡಿಕೊಳ್ಳಲಾಗಿದೆ ಎಂದು ಸುದ್ದಿ ಗೋಷ್ಠಿಯಲ್ಲಿ ತಿಳಿಸಲಾಯಿತು.

ಬಿಜೆಪಿಯ ಸಚಿವ ಅನಂತಕುಮಾರ್ ಹೆಗ್ಡೆ ಸಂವಿಧಾನ ಬದಲಿಸುವ ಮಾತನ್ನಾಡುತ್ತಾರೆ. ಹಾಗಾಗಿ ಇಂತಹ ಪಕ್ಷವನ್ನು ದೂರ ಇಡುವ ಕಾರಣಕ್ಕಾಗಿ ಈ ಮೈತ್ರಿ ಅಗಿದೆ. ನಾವೆಲ್ಲರೂ ರಾಮನಗರ ಕ್ಷೇತ್ರದ ಮತದಾರರು. ನಮ್ಮ ಎಲ್ಲರ ಸಂಪೂರ್ಣ ಬೆಂಬಲ ಅನಿತಾ ಕುಮಾರಸ್ವಾಮಿ ಅವರಿಗೆ ಮಾತ್ರ.ಸಿಎಂ.ಲಿಂಗಪ್ಪ ಅವರು ನಮ್ಮ ನಾಯಕರು, ಅವರ ಮಗನನ್ನು ಕರೆದು ಕೊಂಡು ಹೋಗಿ ಮನೆ ಒಡೆಯಲಾಗಿದೆ. ಚಂದ್ರಶೇಖರ್ ಅವರ ಬಗ್ಗೆ ನಮಗೆ ಗೌರವ ಇದೆ. ಆದರೆ ಚುನಾವಣೆಯಲ್ಲಿ ಮಾತ್ರ ನಮ್ಮ ಮತ ಅನಿತಾ ಕುಮಾರಸ್ವಾಮಿ ಅವರಿಗೆ ಮಾತ್ರ ಎಂಬುದು ದಲಿತ ಸಂಘಟನೆ ಗಳ ಒಕ್ಕೂಟದ ನಾಯಕರ ಹೇಳಿಕೆಯಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version