ರಾಜಕೀಯ
ಮಂಡ್ಯ ಲೋಕಸಭಾ ಉಪ ಚುನಾವಣೆ: ಕಡೆ ದಿನ 7 ನಾಮಪತ್ರ ಸಲ್ಲಿಕೆ
ಸುದ್ದಿದಿನ ಡೆಸ್ಕ್ : ಮಂಡ್ಯ ಲೋಕಸಭಾ ಉಪ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕಡೆಯ ದಿನವಾದ ಇಂದು 7 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಭಾರತೀಯ ಜನತಾ ಪಕ್ಷದ ಡಾ. ಸಿದ್ದರಾಮಯ್ಯ ಅವರು 1 ನಾಮಪತ್ರ, ಪಕ್ಷೇತರ ಅಭ್ಯರ್ಥಿಗಳಾಗಿ ನಂದೀಶ್ ಕುಮಾರ್ ಅವರು 1 ನಾಮಪತ್ರ, ಎಂ.ಹೊಣ್ಣೇಗೌಡ ಅವರು 1 ನಾಮಪತ್ರ, ಕೌಡ್ಲೆ ಚನ್ನಪ್ಪ ಅವರು 1 ನಾಮಪತ್ರ, ಬಿ.ಎಸ್.ಗೌಡ ಅವರು 1 ನಾಮಪತ್ರ, ಶಂಭುಲಿಂಗೇಗೌಡ (ಗಾಂಧೀವಾದಿ) ಅವರು 1 ನಾಮಪತ್ರ ಹಾಗೂ ಕೆ.ಎಸ್.ರಾಜಣ್ಣ ಅವರು 1 ನಾಮಪತ್ರವನ್ನು ಸಲ್ಲಿಸಿದ್ದಾರೆ.
ಮಂಡ್ಯ ಲೋಕಸಭಾ ಉಪ ಚುನಾವಣೆಗೆ ಒಟ್ಟಾರೆ 9 ಅಭ್ಯರ್ಥಿಗಳಿಂದ 14 ನಾಮಪತ್ರಗಳು ಸಲ್ಲಿಕೆಯಾಗಿದೆ ಎಂದು ಜಿಲ್ಲಾ ಚುನಾಣಾಧಿಕಾರಿ ಹಾಗೂ ಜಿಲ್ಲಾಧಿಕರಿ ಎನ್.ಮಂಜುಶ್ರೀ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401