ರಾಜಕೀಯ

ಲೋಕಸಭಾ ಚುನಾವಣೆ: ಫೇಕ್ ನ್ಯೂಸ್‍ಗಳಿಗೆ ಕಡಿವಾಣ

Published

on

ಸುದ್ದಿದಿನ ಡೆಸ್ಕ್: ಮುಂದಿನ ವರ್ಷ ಲೋಕಸಭಾ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಫೇಕ್‍ನ್ಯೂಸ್ ಹರಿದಾಡುವಿಕೆಗೆ ಚುನಾವಣಾ ಆಯೋಗ ಬ್ರೇಕ್ ಹಾಕಲು ಮುಂದಾಗಿದ್ದು ಈ ಕುರಿತು ಒಂದು ಗಂಭೀರ ಸಭೆ ನಡೆಸಲಾಗಿದೆ.

ಫೇಸ್‍ಬುಕ್ ಹಾಗೂ ಟ್ವಿಟರ್ ಜತೆ ಸಭೆ ನಡೆಸಿರುವ ಇಸಿ, ಎರಡೂ ಸಂಸ್ಥೆಗಳು ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ ಕೆಲವು ಸೂಚನೆಗಳನ್ನು ನೀಡಿದೆ.
ಚುನಾವಣೆ ನಡೆಯುವ 48 ಗಂಟೆಗಳಿಗೆ ಮುನ್ನ ರಾಜಕೀಯ ಪಕ್ಷಕ್ಕೆ ಸೇರಿದ ಯಾವುದೇ ನಾಯಕರ ಕುರಿತು ಸುದ್ದಿಗಳು, ಕೃಪಾ ಪೋಷಿತ ಲೇಖನಗಳು ಹಾಗೂ ಜಾಹೀರಾತುಗಳನ್ನು ಪೋಸ್ಟ್ ಮಾಡುವಂತಿಲ್ಲ ಇದನ್ನ ಸೋಶಿಯಲ್ ಮೀಡಿಯಾಗಳು ತಡೆಯಲೇ ಬೇಕಿದೆ.

Read Also: ರಾಜಕೀಯ ವಿವಾದೋದ್ಯಮ: ಪ್ರತಿರೋಧದ ಹಾದಿ

ಜಾಲತಾಣಗಳಲ್ಲಿ ಹರಿದಾಡುವ ಸುಳ್ಳು ಸುದ್ದಿಗಳನ್ನು ತಡೆಯಬೇಕು. ಅನುಮಾನ ಬರುವ ಪೋಸ್ಟ್‍ಗಳನ್ನು ಸಿಬ್ಬಂದಿ ವರ್ಗ ಪರಿಶೀಲಿಸಿ ಅದನ್ನು ರದ್ದು ಮಾಡಬೇಕು. ಅಂಥ ಖಾತೆಗಳ ಮೇಲೆ ಕಣ್ಣಿಡಬೇಕು ಎಂದು ಇಸಿ ಹೇಳಿದೆ.  ಇಸಿ ಸಲಹೆಗಳನ್ನು ಸ್ವೀಕರಿಸಿರುವ ಫೇಸ್‍ಬುಕ್ ಹಾಗೂ ಟ್ವಿಟರ್ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿವೆ.

 

Leave a Reply

Your email address will not be published. Required fields are marked *

Trending

Exit mobile version