ರಾಜಕೀಯ
ಲೋಕಸಭಾ ಚುನಾವಣೆ : ಇಂದು ಸಂಜೆ ಚುನಾವಣಾ ಆಯೋಗ ‘ಚುನಾವಣಾ ದಿನಾಂಕ’ ಹೊರಡಿಸುವ ಸಾಧ್ಯತೆ
ಸುದ್ದಿದಿನ,ದೆಹಲಿ: ಲೋಕಸಭಾ ಚುನಾವಣಾ-2019ರ ದಿನಾಂಕದ ಅಧಿಸೂಚನೆಯನ್ನು ಚುನಾವಣಾ ಆಯೋಗ ಭಾನುವಾರ ಸಂಜೆ 5ಕ್ಕೆ ಹೊರಡಿಸುವ ಸಾಧ್ಯತೆ ಇದ್ದು, ಈ ಕುರಿತು ಶನಿವಾರ ಪೂರ್ವ ಸಿದ್ಧತೆ ನಡೆದಿದೆ ಎಂದು ಎನ್ನಲಾಗುತ್ತಿದೆ.
ಚುನಾವಣಾ ಆಯೋಗವು ಲೋಕಸಭಾ ಚುನಾವಣೆ ಮತದಾನದ ದಿನಾಂಕವನ್ನು ಅಂತಿಮಗೊಳಿಸಿದ್ದು, ಈ ಸಂಬಂಧ ಶನಿವಾರ ಸಭೆ ನಡೆಸಿದೆ. ಚುನಾವಣೆ ಮತದಾನವು ಏಪ್ರಿಲ್, ಮೇ ನಲ್ಲಿ 7 ಅಥವಾ 8 ಹಂತಗಳಲ್ಲಿ ನಡೆಯಲಿದೆ ಎನ್ನಲಾಗಿದೆ.
ಚುನಾವಣಾ ದಿನಾಂಕ ಘೊಷಣೆ ವಿಳಂಬವನ್ನು ಪ್ರತಿ ಪಕ್ಷಗಳು ಪ್ರಶ್ನಿಸಿದ್ದು, ಕಾಂಗ್ರೆಸ್ ಹಿರಿಯ ಮುಖಂಡ ಅಹ್ಮದ್ ಪಟೇಲ್ ಅವರು ವಿಳಂಬದ ಬಗ್ಗೆ ಚುನಾವಣಾ ಆಯೋಗವನ್ನು ಪ್ರಶ್ನಿಸಿದ್ದು, ಪ್ರಧಾನಿ ಅವರ ಅಧಿಕೃತ ಪ್ರವಾಸ ಕಾರ್ಯಕ್ರಮ ಮುಗಿಯುವ ತನಕ ಕಾಯಲಾಗುತ್ತಿದೆಯೇ ಪ್ರಶ್ನಿಸಿದ್ದಾರೆ.
ಪ್ರಥಮ, ದ್ವಿತೀಯ ಹಂತದ ಚುನಾವಣೆ ನಡೆಯುವ ಕುರಿತು ಮುಂದಿನ ವಾರ ಚುನಾವಣಾ ವೀಕ್ಷಕರ ಸಭೆ ನಡೆಯುವ ಸಾಧ್ಯತೆ ಇದೆ. ಆದರೆ, 2009ರಲ್ಲಿ ಮೇ 2ರಂದು ಚುನಾವಣೆ ನಡೆಯಲಿದೆ ಎಂದು ಆಯೋಗ ಅಧಿಸೂಚನೆ ಹೊರಡಿಸಿತ್ತು. ಐದು ಹಂತದ ಚುನಾವಣೆಯು ಏಪ್ರಿಲ್ 16ರಂದು ಆರಂಭವಾಗಿ ಮೇ 13 ರಂದು ಮುಕ್ತಾಯಗೊಂಡಿತ್ತು.
2014ರಲ್ಲಿ ಇದೇ ಚುನಾವಣೆ ಒಂಭತ್ತು ಹಂತದಲ್ಲಿ ನಡೆಸಲು ಮಾರ್ಚ್ 5ರಂದು ಘೋಷಣೆಯಾಗಿತ್ತು. ಏಪ್ರಿಲ್, ಮೇ ಎರಡು ತಿಂಗಳಿಗೂ ಹೆಚ್ಚು ಕಾಲ ನಡೆದಿತ್ತು. ಏಪ್ರಿಲ್ 7ರಂದು ಮೊದಲ ಹಂತ ಮತ್ತು ಮೇ 12ರಂದು ದ್ವಿತೀಯ ಹಂತದ ಚುನಾವಣೆ ನಡೆದಿತ್ತು. ಆದರೆ, ಈ ಬಾರಿಯ ಚುನಾವಣೆಯು ಜೂನ್ 3ಕ್ಕೆ ಅಂತ್ಯಗೊಳ್ಳುವ ಸಾಧ್ಯತೆ ಇದೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401