ದಿನದ ಸುದ್ದಿ
ಪರಿಹಾರ ಕೇಂದ್ರದಲ್ಲೇ ಒಂದಾದ ಪ್ರೇಮಿಗಳು
ಸುದ್ದಿದಿನ ಡೆಸ್ಕ್: ಮಹಾಮಳೆಗೆತತ್ತರಿಸಿ ಹೋಗಿರುವ ಕೇರಳ ಈಗ ನಿಧನವಾಗಿ ಸುಧಾರಿಸಿಕೊಳ್ಳುತ್ತಿದೆ. ಪ್ರವಾಹ ಪೀಡಿತ ಸ್ಥಳಗಳಲ್ಲಿ ಆರಂಭವಾಗಿರುವ ಪರಿಹಾರ ಕೇಂದ್ರಗಳಲ್ಲಿ ಜನರು ಆಶ್ರಯ ಪಡೆದುಕೊಂಡಿದ್ದಾರೆ. ಇಂತಹ ಕೇಂದ್ರಗಳಲ್ಲಿ ಕರುಣಾಜನಕ ಕಥೆಗಳು ತೆರೆದುಕೊಳ್ಳುತ್ತಿವೆ. ಅಲಪ್ಪುಝ ಜಿಲ್ಲೆಯ ಪರಿಹಾರ ಕೇಂದ್ರವೊಂದರಲ್ಲಿ ಎರಡು ಕುಟುಂಬದ ಕುಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಹಲವು ವರ್ಷಗಳಿಂದ ಬಿ ಬುನು ಮತ್ತು ಪಿ ಮೀರಾ ಪರಸ್ಪರ ಪ್ರೀತಿ ಮಾಡುತ್ತಿದ್ದರು. ತಮ್ಮ ಮನೆಗಳಲ್ಲಿ ಈ ವಿಷಯ ಹೇಳಿಕೊಂಡಿರಲಿಲ್ಲ. ಪ್ರವಾಹದ ಬಳಿಕ ಇಬ್ಬರೂ ಮನೆಯ ಹಿರಿಯರಿಗೆ ತಿಳಿಸಿದ್ದರಿಂದ ಪರಿಹಾರ ಕೇಂದ್ರದಲ್ಲೇ ಇಬ್ಬರಿಗೂ ಮದುವೆ ಮಾಡಿಸಿದ್ದಾರೆ. ಭಾರತೀಯ ವಾಯು ಪಡೆಯಲ್ಲಿ ಸೇವೆ ಸಲ್ಲಿತ್ತಿರುವ ಬಿನು ರಜೆಗೆಂದು ಮನೆಗೆ ಬಂದಿದ್ದರು. ಇದೇ ವೇಳೆ ಕೇರಳದಲ್ಲಿ ಪ್ರವಾಹ ಉಂಟಾಗಿದ್ದರಿಂದ ಪ್ರೇಮಿಗಳ ಇಬ್ಬರ ಮನೆಗಳು ನೀರಿನಲ್ಲಿ ಮುಳುಗಿದ್ದವು.