ದಿನದ ಸುದ್ದಿ

ಚಂದ್ರ ಗ್ರಹಣ | ಮುರುಘಾ ಮಠದಲ್ಲಿ‌ ಮದುವೆ – ಲಿಂಗದೀಕ್ಷೆ

Published

on

ಸುದ್ದಿದಿನ, ಚಿತ್ರದುರ್ಗ | ಮೌಢ್ಯಾಚರಣೆ ಮುರಿದು ಒಂದಿಲ್ಲೊಂದು ಹೊಸ ಸಾಂಪ್ರದಾಯಿಕಕ್ಕೆ ಹಾಡುವ ಚಿತ್ರದುರ್ಗದ ಮುರುಘಾ ಮಠ ಜುಲೈ 27 (ನಿನ್ನೆ) ರಂದು ಸಂಭವಿಸಿದ ಚಂದ್ರ ಗ್ರಹಣದಂದು ಮದುವೆ, ಏಳು ಜನರಿಗೆ ಲಿಂಗದೀಕ್ಷೆ ನೀಡಿದರು.

ಚಿತ್ರದುರ್ಗದ ಮುರುಘಾ ಮಠದಲ್ಲಿ ಅಮಾವಾಸ್ಯೆಯಂದು ವಿವಾಹ ಮಾಡಿಸಲಾಗುತ್ತಿತ್ತು. ಆದರೆ, ಗ್ರಹಣ ದಿನದಂದು ಜೋಡಿಗೆ ಮದುವೆ ಹಾಗೂ ಏಳು ಜನರಿಗೆ ಲಿಂಗದೀಕ್ಷೆ ಮಾಡಿಸಿ ಅನಿಷ್ಟ ಪದ್ಧತಿ ವಿರುದ್ಧ ಕ್ರಾಂತಿಸಾರಿದ್ದಾರೆ.

ವಚನ ಮಾಂಗಲ್ಯ ಮೂಲಕ ವಿವಾಹದ ದಾಂಪತ್ಯ ಜೀವನಕ್ಕೆ ಕಾಲಿಟ್ಟ ದಂಪತಿ ವಿಭೂತಿ, ರುದ್ರಾಕ್ಷಿ ಧರಿಸಿ ಬಸವತತ್ವದ ಪ್ರತಿಜ್ಞೆ ವಿಧಿ ಸ್ವೀಕರಿಸಿದರು.

ಗ್ರಹಣ ಕಾಲದಲ್ಲಿ ಆಹಾರ, ನೀರು ಸೇವನೆ ಅನಿಷ್ಟಕರ ಎಂದು ಭಾವಿಸಲಾಗುತ್ತದೆ. ಆದರೆ, ಈ ಗೊಡ್ಡು ಸಂಪ್ರದಾಯ ಮುರಿದು ಈ ವೇಳೆ ಜನರು ಪ್ರಸಾದ ಸ್ವೀಕರಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version