ದಿನದ ಸುದ್ದಿ
ಚಂದ್ರಗ್ರಹಣ: ಜೋತಿಷಿ ಮಾತು ಕೇಳಿ ಊರು ಬಿಟ್ಟ ಗ್ರಾಮಸ್ಥರು !!
ಸುದ್ದಿದಿನ ಡೆಸ್ಕ್: ಕೇರಳದ ಜೋತಿಷಿಯೊಬ್ಬ ಖಗ್ರಾಸ ಚಂದ್ರಗ್ರಹಣ ವೇಳೆ ನೀವು ಗ್ರಾಮದಲ್ಲಿದ್ದರೆ ರಕ್ತಕಾರಿ ಸಾಯುತ್ತೀರ ಎಂದು ಹೇಳಿದ್ದಕ್ಕೆ ಜನ ಗ್ರಾಮವನ್ನೇ ತೊರೆದಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಎನ್ ಆರ್ ಪುರ ತಾಲ್ಲೂಕಿನ ಬಾಳೆ ಗ್ರಾಮದ ಅರವತ್ತು ಕುಟುಂಬಗಳು ಜೋತಿಷಿ ಮಾತು ನಂಬಿ ಊರು ಬಿಟ್ಟಿದ್ದಾರೆ. ಗ್ರಾಮದ ಹೊರವಲಯದಲ್ಲಿ ಬೀಡುಬಿಟ್ಟಿರುವ ಕುಟುಂಬಗಳು ಜಾನುವಾರುಗಳನ್ನು ಮನೆಯಲ್ಲಿಯೇ ಬಿಟ್ಟು ಹೋಗಿರುವ ಕುರಿತು ವರದಿಯಾಗಿದೆ.