ದಿನದ ಸುದ್ದಿ
ಮದ್ದೂರು | ಬಗರ್ ಹುಕುಂ ಸಾಗುವಳಿದಾರರ ತಾಲ್ಲೂಕು ಸಮಾವೇಶ : ಸಾಗುವಳಿ ಪತ್ರನೀಡಲು ಮನವಿ
ಸುದ್ದಿದಿನ, ಮದ್ದೂರು : ಬಗರ್ ಹುಕುಂ ಸಾಗುವಳಿದಾರರ ತಾಲ್ಲೂಕು ಸಮಾವೇಶ ಹಾಗೂ ಕರ್ನಾಟಕ ಪ್ರಾಂತ್ಯ ರೈತ ಸಂಘದ ವತಿಯಿಂದ ಮದ್ದೂರು ಪಟ್ಟಣದ ಶ್ರೀ ನರಸಿಂಹಸ್ವಾಮಿ ದೇವಾಲಯದ ಆವರಣದಲ್ಲಿ ಇಂದು ತಾಲ್ಲೂಕು ಮಟ್ಟದ ಸಮಾವೇಶವನ್ನು ನಡೆಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕರ್ನಾಟಕ ಪ್ರಾಂತ್ಯ ರೈತ ಸಂಘದ ರಾಜ್ಯಾಧ್ಯಕ್ಷರಾದ ಬಯ್ಯಾರೆಡ್ಡಿ ರವರು ಬಗರ್ಹುಕುಂ ಸಾಗುವಳಿ ಸಕ್ರಮ ಕೋರಿ ನಮೂನೆ 57 ರ ಅರ್ಜಿ ಸ್ವೀಕರಿಸಬೇಕು ಹಿಂದೆ ಮಂಜೂರಾತಿ ಆಗಿರುವ ರೈತರ ಕೃಷಿ ಭೂಮಿ ದುರಸ್ತಿ ಮಾಡಲು ವಿಶೇಷ ತಹಸೀಲ್ದಾರ್ ಅವರನ್ನು ನೇಮಕ ಮಾಡುವಂತೆ ನಮ್ಮ ಗ್ರಾಮಗಳಲ್ಲಿ ಇರುವ ಬಗರಹುಕುಂ ಸಾಗುವಳಿ ಚೀಟಿಗಳನ್ನು ನೀಡಬೇಕು.
ಅಲ್ಲದೆ ಹಿಂದೆ ಮಂಜೂರಾತಿಯಾಗಿರುವ ಭೂಮಿಯನ್ನು ದುರಸ್ತಿ ಮಾಡಿ ರೈತರ ಭೂ ದಾಖಲಾತಿಗಳನ್ನು ಸಮರ್ಪಕಗೊಳಿಸಿ ಕೆಲಸ ನಿಗದಿತ ಅವಧಿಯಲ್ಲಿ ಮುಗಿಯುವಂತೆ ಖಾತರಿಗೊಳಿಸಲು ವಿಶೇಷ ತಹಶೀಲ್ದಾರ್ ಅವರ ನೇಮಕ ಮಾಡಬೇಕು ಎಂದು ಒತ್ತಾಯಿಸಿದರು.
ಶಿವಮೊಗ್ಗ ಜಿಲ್ಲೆಯಲ್ಲಿ ಕಾಗೋಡು ತಿಮ್ಮಪ್ಪರವರ ಹೋರಾಟ ಮತ್ತು ಪರಿಶ್ರಮದಿಂದ ಐದು ಲಕ್ಷ ರೈತ ಕುಟುಂಬಗಳಿಗೆ ಜಮೀನು ಸಿಕ್ಕಿದೆ. ಗೋಮಾಳ ಸರ್ಕಾರಿ ಮತ್ತಿತರ ವಿವರಗಳಿರುವ ಭೂಮಿಯಲ್ಲಿ ಬೇಸಾಯ ಮಾಡುತ್ತಿರುವ ಎಲ್ಲ ರೈತರು ಈ ಅವಕಾಶವನ್ನು ಬಳಸಿಕೊಂಡು ಭೂಮಿ ಸಕ್ರಮ ಮಾಡಿಕೊಳ್ಳಲು ಮತ್ತೊಮ್ಮೆ ಅವಕಾಶ ಸಿಕ್ಕಿದೆ ಎಂದು ರೈತರಿಗೆ ತಿಳಿಸಿದರು.
ಹಾಗೂ ಇನ್ನು ಮುಂತಾದ ರೈತರ ಸಮಸ್ಯೆಗಳಿಗೆ ರಾಜ್ಯ ಸರ್ಕಾರ ಈ ಕೂಡಲೇ ಮಧ್ಯ ಪ್ರವೇಶಿಸಿ ಸ್ಪಂದಿಸಬೇಕು ಇಲ್ಲದಿದ್ದರೆ ರಾಜ್ಯವ್ಯಾಪಿ ಉಗ್ರ ಹೋರಾಟವನ್ನು ನಡೆಸಲಾಗುವುದು ಎಂದು ಎಚ್ಚರಿಸಿದರು.
ಸಭೆಯಲ್ಲಿತಾಲ್ಲೂಕುಪ್ರ.ಕಾ.ಯಶವಂತ್,ನರಸಿಂಹೇಗೌಡ, ಆತ್ಮಾನಂದ, ರಾಮು,ಜನವಾದಿ ಮಹಿಳಾ ಸಂಘಟನೆಯ ಪುಪ್ಪ ಮತ್ತು ಪದಾಧಿಕಾರಿಗಳು ರೈತ ಮುಖಂಡರು ಭಾಗವಹಿಸಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401