ದಿನದ ಸುದ್ದಿ
ನ.25 ಹಿಂದೂ ಸಮಾವೇಶ : ಮದ್ದೂರಿನಲ್ಲಿ ಪೂರ್ವ ಭಾವಿ ಸಭೆ
ಸುದ್ದಿದಿನ, ಮದ್ದೂರು : ರಾಷ್ಟ್ರೀಯ ಸ್ವಯಂ ಸೇವಕ ಸಂಸ್ಥೆಯ ಸಂಘ ಪರಿವಾರದವರೆಲ್ಲ ಸೇರಿ ಇಂದು ಮದ್ದೂರು ಪಟ್ಟಣದ ಶ್ರೀರಾಮ ಮಂದಿರ ನಿರ್ಮಾಣದ ಬಗ್ಗೆ ಪೂರ್ವಭಾವಿ ಸಭೆ ನಡೆಸಿದರು.
ನಂತರ ತಾಲ್ಲೂಕು ಕಾರ್ಯದರ್ಶಿ ಸಿದ್ದು ರವರು ಮಾತನಾಡಿದ ಶ್ರೀರಾಮನ ಜನ್ಮಸ್ಥಳ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾಗಬೇಕು ಆದ್ದರಿಂದ ಹಿಂದೂ ಸಮಾವೇಶವನ್ನು ದಿನಾಂಕ 25-11-18 ರಂದು ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಏರ್ಪಡಿಸಲಾಗಿದೆ ಈ ಕಾರ್ಯಕ್ರಮಕ್ಕೆ ಮದ್ದೂರು ತಾಲ್ಲೂಕಿನಾದ್ಯಂತ 2000 ಸಾವಿರಕ್ಕೂ ಅಧಿಕ ಶ್ರೀರಾಮನ ಭಕ್ತರು ಪಾಲ್ಗೊಳ್ಳುತ್ತಿದ್ದಾರೆ ಆದ್ದರಿಂದ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮಕ್ಕೆ ಬಾಗವಹಿಸ ಬೇಕೆಂದು ಮನವಿ ಮಾಡಿದರು.
ಸಭೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯ್ ಕುಮಾರ್, ಜಿಲ್ಲಾ ಮಹಿಳಾ ಘಟಕ ಕಾರ್ಯದರ್ಶಿ ಕುಮಾರಿ ರೂಪಾ, ತಾಲ್ಲೂಕು ಯುವ ಮೋರ್ಚಾ ಅಧ್ಯಕ್ಷ ಎಚ್ ಡಿ ರಾಜೇಶ್, ತಾಲೂಕು ಉಪಾಧ್ಯಕ್ಷರಾದ ಸೋಮಣ್ಣ ,ಎಸ್ಸಿಮೋರ್ಚಾ ಪ್ರಧಾನ ರವಿ ಕಾರ್ಯದರ್ಶಿ, ಹಾಗೂ ಇತರೆ ಮುಖಂಡರು ಮತ್ತು ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.