ದಿನದ ಸುದ್ದಿ
ಟಿಪ್ಪು ಜಯಂತಿ : ಮದ್ದೂರು ಪೋಲೀಸ್ ಠಾಣೆಯಲ್ಲಿ ಶಾಂತಿ ಸಭೆ
ಸುದ್ದಿದಿನ,ಮದ್ದೂರು : ಪಟ್ಟಣದ ಪೋಲೀಸ್ ಠಾಣೆಯಲ್ಲಿ ಜಿಲ್ಲಾ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜ್ ರವರ ನೇತೃತ್ವದಲ್ಲಿ ದಿ.10ರಂದು ನಡೆಯಲಿರುವ ಟಿಪ್ಪು ಜಯಂತಿ ಅಂಗವಾಗಿ ಶಾಂತಿ ಸಭೆಯನ್ನು ನಡೆಸಿದರು.
ನಂತರ ಮಾತನಾಡಿದ ಅವರು ದಿ. 9-11-18 ಬೆಳಿಗ್ಗೆ 9ರಿಂದ 11-11-18ರ ಸಂಜೆ 6 ರವರೆಗೆ ಪಟ್ಟಣದಲ್ಲಿ ನಿಷೇದಾಜ್ಞೆ ಇರುತ್ತದೆ ರಾಜ್ಯ ಸರ್ಕಾರದ ಆದೇಶದಂತೆ ಟಿಪ್ಪು ಜಯಂತಿ ಆಚರಣೆಯನ್ನು ಬಹಳ ವಿಜೃಂಭಣೆಯಿಂದ ಆಚರಿಸದಂತೆ ಆದೇಶ ಹೊರಡಿಸಿದೆ ಆದ್ದರಿಂದ ತಾಲ್ಲೂಕಿನ ಮುಸ್ಲಿಂ ಸಮುದಾಯದವರು ಹಾಗೂ ಅನ್ಯ ಜಾತೀಯ ಸಮುದಾಯದವರು ಯಾವುದೇ ಮೆರವಣಿಗೆ ನಡೆಸದಂತೆ ತಿಳಿಸಿದರು
ಪಟ್ಟಣದಲ್ಲಿ ಬ್ಯಾನರ್ ಬಂಟಿಂಗ್ಸ್ ಯಾವುದೇ ಮೆರವಣಿಗೆ ಡಿಜೆ ಸೌಂಡ್ಸ್ ಸಾಮಾಜಿಕ ಜಾಲ ತಾಣಗಳಲ್ಲಿ ಪ್ರಚೊಧನಕಾರಿ ವಿಷಯಗಳು ಬೈಕ್ ಮೆರವಣಿಗೆ ಹಾಗೂ ಬೇರೆ ಊರುಗಳಿಂದ ಸ್ನೇಹಿತರು ನೆಂಟರು ಬಂದು ಯಾವುದೇ ತೊಂದರೆಗಳನ್ನು ನಡೆಸಿದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.ಕಳೆದ ವರ್ಷ ಯಾವುದೇ ಅಹಿತಕರ ಘಟನೆಗಳು ನಡೆಯಲಿಲ್ಲ ಆದ್ದರಿಂದ ಈ ಬಾರಿಯೂ ಶಾಂತಿಯುತವಾಗಿ ನಡೆಸಬೇಕು ಎಂದು ತಿಳಿಸಿದರು.
ಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ ಉಮಾ ಶಂಕರ್ ರವರು ಮಾತನಾಡಿ ತಾಲೂಕಿನಲ್ಲಿರುವ ಮುಸ್ಲಿಂ ಸಮುದಾಯದವರು ಅನ್ಯ ಜಾತೀಯ ಸಮುದಾಯದವರು ಬಾಂಧವ್ಯ ದಿಂದ ಒಗ್ಗಟ್ಟಾಗಿದ್ದೇವೆ ಎಂದು ಹರ್ಷ ವ್ಯಕ್ತಪಡಿಸಿದರು
ತಾಲ್ಲೂಕಿನಲ್ಲಿ ಯಾವುದೇ ಹೋರಾಟಗಳು ನಡೆದರು ಸ್ವ ಇಚ್ಛೆಯಿಂದ ಬಂದು ಭಾಗವಹಿಸುವರು ಎಂದರು.
ನಂತರ ನೂತನ ಪುರಸಭಾ ಸದಸ್ಯ ಆದಿಲ್ ರವರು ಮಾತನಾಡಿ ಜಾಮೀಯ ಶಾದಿ ಮಹಲ್ ಮುಸ್ಲಿಂ ಕಮಿಟಿ ವತಿಯಿಂದ ಐದು ಜನ ಮಹಿಳಾ ಹೋರಾಟಗಾರ್ತಿ ಯವರಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು ಮತ್ತು ಟಿಪ್ಪು ಜಯಂತಿ ಅಂಗವಾಗಿ ನೂರು ಜನರ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿದೆ ಆ ರಕ್ತದಾನವನ್ನು ಆದಿಚುಂಚನಗಿರಿ ಆಸ್ಪತ್ರೆಗೆ ನೀಡಲಾಗುವುದು ಎಂದರು.
ಸರ್ಕಲ್ ಇನ್ಸ್ಪೆಕ್ಟರ್ ಮಹೇಶ್ ರವರ ನೇತೃತ್ವದಲ್ಲಿ ತಾಲ್ಲೂಕಿನಾದ್ಯಂತ ಅಹಿತಕರ ಘಟನೆಗಳು ಸಂಬಂಧಿಸಿದಂತೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ವರಿಷ್ಠಾಧಿಕಾರಿ ರವರು ತಿಳಿಸಿದರು.
ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಲಾವಣ್ಯ ಡಿವೈಎಸ್ಪಿ ಶೈಲೇಂದ್ರ ಸರ್ಕಲ್ ಇನ್ಸ್ಪೆಕ್ಟರ್ ಮಹೇಶ್ ಹಾಗೂ ವಿವಿಧ ಸಂಘಟನೆಗಳ ಮುಖಂಡರು ಪುರಸಭಾ ಸದಸ್ಯರು ಪೋಲೀಸ್ ಇಲಾಖೆ ಸಿಬ್ಬಂದಿಗಳು ಸಾರ್ವಜನಿಕರು ಭಾಗವಹಿಸಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401