ದಿನದ ಸುದ್ದಿ

ಟಿ. ನರಸೀಪುರ | ಯುವ ಪೀಳಿಗೆಗೆ ‘ಮಹಾನಾಯಕ’ ಧಾರವಾಹಿ ಪ್ರೇರಣೆಯಾಗುತ್ತಿದೆ : ಪುರಸಭಾ ಸದಸ್ಯ ಎಲ್. ಮಂಜುನಾಥ್

Published

on

ಸುದ್ದಿದಿನ,ಟಿ. ನರಸೀಪುರ: ಯುವ ಪೀಳಿಗೆಗೆ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಜೀವನಾಧಾರಿತ ‘ಮಹಾನಾಯಕ’ ಧಾರವಾಹಿ ಪ್ರೇರಣೆಯಾಗುತ್ತಿದೆ ಎಂದು 4ನೇ ವಾರ್ಡಿನ ಪುರಸಭಾ ಸದಸ್ಯ ಎಲ್. ಮಂಜುನಾಥ್ ತಿಳಿಸಿದರು.

ಪಟ್ಟಣದ ಭೈರಾಪುರ ಜೋಡಿ ರಸ್ತೆಯಲ್ಲಿ ಮಹಾನಾಯಕ ಧಾರವಾಹಿಯ ಫ್ಲೆಕ್ಸ್‍ನನ್ನ ಅಳವಡಿಸಿ ಪುಷ್ಪಾರ್ಚನೆ ಗೈದು ಮೊಂಬತ್ತಿಯನ್ನು ಬೆಳಗಿ ಶಾಲಾ ವಿದ್ಯಾರ್ಥಿಗಳಿಗೆ ಅಂಬೇಡ್ಕರ್‍ರವರ ಪುಸ್ತಕವನ್ನು ಉಚಿತವಾಗಿ ನೀಡುವುದರ ಮುಖಾಂತರ ಧಾರವಾಹಿಯ ಮಹತ್ವವನ್ನು ಸಾರುವ ಮಾತುಗಳನ್ನಾಡುತ್ತಾ, ಈ ಧಾರಾವಾಹಿ ಸಮಾಜದಲ್ಲಿ ನೋವುಂಡ ಶೋಷಿತ ಸಮುದಾಯಗಳು ಅನುಭವಿಸಿದ ನರಕಯಾತನೆಯನ್ನ ಬಾಬಾ ಸಾಹೇಬ್ ಸೇರಿದಂತೆ ಅವರ ಕುಟುಂಬ ವರ್ಗ ಪಟ್ಟಂತಹ ಪಾಡು, ಅದನ್ನು ಮೆಟ್ಟಿನಿಂತು ತಮ್ಮ ಜ್ಞಾನಾರ್ಜನೆಯ ಮೂಲಕ ಜಾತೀಯತೆ ಪಿಡುಗನ್ನು ತೊಡೆದು ಎಲ್ಲರೂ ಸರಿಸಮಾನರು ಎಂಬುದನ್ನು ಕಾನೂನಾತ್ಮಕವಾಗಿ ತಾವು ರಚಿಸಿದ ಸಂವಿಧಾನದಲ್ಲಿ ಅಳವಡಿಸಿ ಇಂದು ನಾವೆಲ್ಲರೂ ಶೈಕ್ಷಣಿಕ-ರಾಜಕೀಯ ಹಾಗೂ ಆರ್ಥಿಕವಾಗಿ ಬೆಳೆಯಲು ಸಾಧ್ಯವಾಗಿದೆ. ಪ್ರತಿಯೊಬ್ಬರ ಕಣ್ಣಲ್ಲೂ ನೀರೂರಿಸುವ ಮತ್ತು ಮೈನವಿರೇಳಿಸಿ ಸ್ಪೂರ್ಥಿಯಾಗುವ ಇಂತಹ ಧಾರಾವಾಹಿಯನ್ನು ನಿರ್ಮಿಸಿ ನಿರ್ದೇಶಿಸಿ ಇಡೀ ಭಾರತಕ್ಕೆ ಅಂಬೇಡ್ಕರ್‍ರವರ ಜೀವನ ಚರಿತ್ರೆಯನ್ನು ತಿಳಿಸಿಕೊಟ್ಟ ಮಹಾನರಿಗೆ ಕೋಟಿ ಕೋಟಿ ನಮನಗಳನ್ನ ಅರ್ಪಿಸುತ್ತೇವೆಂದರು.

ಅವರು ನೋವುಂಡು ತಮ್ಮ ಇಡೀ ಜೀವನವನ್ನ ತ್ಯಾಗ ಮಾಡಿ ಶೋಷಿತರಿಗೇ ತಮ್ಮ ಜೀವನವನ್ನು ಮೀಸಲಿಟ್ಟ ಇಂತಹ ಮಹಾನಾಯಕರ ಆದರ್ಶ ಎಲ್ಲರಿಗೂ ಸ್ಪೂರ್ತಿದಾಯಕವಾಗಲಿ. ವಿದ್ಯಾರ್ಥಿಗಳು ತಪ್ಪದೆ ವಾರದ 2 ದಿನ ಈ ಧಾರಾವಾಹಿಯನ್ನು ನೋಡಿ ಅವರಂತಯೇ ಹೆಚ್ಚು ಜ್ಞಾನಾಭಿವೃದ್ಧಿಗೆ ಗಮನ ನೀಡಬೇಕೆಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಗ್ರಾಮದ ಮಾಜಿ ಗ್ರಾ.ಪಂ. ಅಧ್ಯಕ್ಷ ಬಿ.ಎಲ್. ಮಹದೇವು, ಮುಖಂಡರುಗಳಾದ ಚಿಕ್ಕಲಿಂಗಯ್ಯ, ಮಹದೇವಯ್ಯ, ದಿಲೀಪ್, ರಾಜೇಂದ್ರ, ಪವನ್, ಹೇಮಂತ್‍ಕುಮಾರ್, ಮಹದೇವಮ್ಮ ಇತರರು ಇದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version