ದಿನದ ಸುದ್ದಿ

ಮಹಾನಾಯಕ ಧಾರಾವಾಹಿ ಅಭಿನಂದನಾ ಬ್ಯಾನರ್ ಉದ್ಘಾಟನೆ

Published

on

ಸುದ್ದಿದಿನ,ಬೆಂಗಳೂರು: ನಂದಿನಿ ಬಡಾವಣೆಯ ಕಂಠೀರವ ನಗರದ‌ ಗ್ರಾಮಸ್ಥರು ಮಹಾನಾಯಕ ಧಾರಾವಾಹಿ ಅಭಿನಂದನಾ ಬ್ಯಾನರ್ ಉದ್ಘಾಟನೆ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಪರಿನಿಬ್ಬಾಣ ದಿನಾಚರಣೆಯನ್ನು ಕ್ಯಾಂಡಲ್ ಜಾಥಾದ ಮೂಲಕ ಆಚರಿಸಿದರು.

ಕಂಠೀರವ ನಗರದ ಸಕಲ ಗ್ರಾಮಸ್ಥರು ಡಾ.ಬಿ.ಆರ್ ಅಂಬೇಡ್ಕರ್ ರ 64ನೇ ಪರಿನಿಬ್ಬಾಣ ದಿನಾಚರಣೆಯನ್ನು ಕಂಠೀರವ ನಗರದ ಮೊದಲನೆಯ ಹಂತದಿಂದ ಎರಡನೇ ಹಂತದಲ್ಲಿನ ಡಾ.ಅಂಬೇಡ್ಕರ್ ಪುತ್ಥಳಿಗೆ ಕ್ಯಾಂಡಲ್ ಜಾಥಾ ನಡೆಸುವ ಮೂಲಕ ನಮನ ಸಲ್ಲಿಸಿದರು. ನಂತರ ಕಂಠೀರವ ಟೆಂಟ್ ಸರ್ಕಲ್ ನಲ್ಲಿ ಮಹಾನಾಯಕ ಧಾರಾವಾಹಿ ಬ್ಯಾನರ್ ಉದ್ಘಾಟನೆ ಮಾಡಿದರು.

ಕಂಠೀರವ ನಗರದ ಗ್ರಾಮಸ್ಥರಾದ ವೆಂಕಟರಾಜು ಹಾಗೂ ಜೈಭೀಮ್ ಯುವಕರ ಸಂಘ ರಾಜ್ಯಾಧ್ಯಕ್ಷರಾದ ಮಹೇಶರವರು ಮಾತನಾಡಿ ಭಾರತದಲ್ಲಿ ಇಷ್ಟು ವರ್ಷಗಳ ಕಾಲ ಅಂಬೇಡ್ಕರ್ ಕೊಡುಗೆಗಳನ್ನು ಜನಸಾಮಾನ್ಯರಿಗೆ ಮುಚ್ಚಿಟ್ಟು ಇತಿಹಾಸ ಮರೆಮಾಚಲಾಗಿದ್ದು ಮಹಾನಾಯಕ ಧಾರಾವಾಹಿ ಡಾ.ಅಂಬೇಡ್ಕರ್ ರ ಸಕಲ ಹೋರಾಟ ಕೊಡುಗೆಯನ್ನು ಜ್ಞಾಪಿಸುತ್ತಿದೆ ಎಂದರು.

ಮಹಾನಾಯಕ ಧಾರಾವಾಹಿ ಪ್ರಸಾರ ಮಾಡುವ ಜೀ ಕನ್ನಡ ವಾಹಿನಿಗೆ ನಾವೆಲ್ಲರೂ ಚಿರರುಣಿಯಾಗಿರಬೇಕೆಂದು ಧನ್ಯವಾದ ಅರ್ಪಿಸಿದರು. ಕಾರ್ಯಕ್ರಮದಲ್ಲಿ ಎಲ್.ಇ.ಡಿಯ ಮೂಲಕ ಡಾ.ಅಂಬೇಡ್ಕರ್ ರ ಕೊಡುಗೆ ಸಾಧನೆ,ಹೋರಾಟವನ್ನು ಬಿತ್ತರಿಸುವ ಮೂಲಕ ಜನರಿಗೆ ಸಂದೇಶ ನೀಡಿದರು.

ಕಾರ್ಯಕ್ರಮಕ್ಕೆ ಸಹಕಾರ ನೀಡಿದ ಸ್ನೇಹಿತರಿಗೆ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು. ಈ ಕಾರ್ಯಕ್ರಮದಲ್ಲಿ ಬರಹಗಾರ, ಯುವಕವಿ ಪರಶುರಾಮ್. ಆಯೋಜಕ ಕುಮಾರ್. ವಿಜಯಭಾಸ್ಕರ್. ಬಸವರಾಜ್. ವೆಂಕಟರಾಜು. ಬೈಲರಾಜು. ಜೈಭೀಮ್ ಯುವಕರ ಸಂಘ ರಾಜ್ಯಾಧ್ಯಕ್ಷರಾದ ಮಹೇಶ್ ಹಾಗೂ ಕಂಠೀರವ ನಗರದ ಒಂದನೇ ಮತ್ತು ಎರಡನೇ ಹಂತದ ಸಕಲ ಗ್ರಾಮಸ್ಥರು ಭಾಗವಹಿಸಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version