ದಿನದ ಸುದ್ದಿ

ಕೊಡಗು ಘಟನೆಗೆ ಮಹಬೂಬ್ ಭಾಷಾ ತೀವ್ರ ಖಂಡನೆ

Published

on

ಸುದ್ದಿದಿನ, ದಾವಣಗೆರೆ : ಕೊಡಗಿಗೆ ಜನರ ಸಮಸ್ಯೆ ಆಲಿಸಲು ಹೋಗಿದ್ದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಮೊಟ್ಟೆ ಎಸೆದ ಘಟನೆಯನ್ನು ದಾವಣಗೆರೆ ಜಿಲ್ಲಾ ಯುವ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹಬೂಬ್ ಭಾಷಾ ತೀವ್ರವಾಗಿ ಖಂಡಿಸಿದ್ದಾರೆ.

ಸಿದ್ದರಾಮಯ್ಯ ಅವರಿಗೆ ಭದ್ರತೆ ಒದಗಿಸುವುದರಲ್ಲಿ ವಿಫಲವಾಗಿರುವುದನ್ನು ನೋಡಿದರೆ ಈ ಸರ್ಕಾರ ವಿರೋಧ ಪಕ್ಷಗಳ ನಾಯಕರನ್ನು ಅಪಮಾನಿಸುವ ದುರುದ್ದೇಶ ಹೊಂದಿರುವುದು ಸ್ಪಷ್ಟವಾಗಿದೆ.

ಈ ದೇಶಕ್ಕೆ ಪ್ರಜಾಪ್ರಭುತ್ವದ ಗಟ್ಟಿ ಅಡಿಪಾಯವಿದೆ. ಅಭಿಪ್ರಾಯ, ವಿಚಾರ ಹಂಚಿಕೊಳ್ಳಲು ಸಂವಿಧಾನದಲ್ಲಿಯೇ ಪ್ರತಿಯೊಬ್ಬರಿಗೂ ಅವಕಾಶವಿದೆ. ನಾವೆಲ್ಲ ಶಾಂತಿಯಿಂದ ಬದುಕಬೇಕಿದೆಯೇ ಹೊರತು ಕ್ಷುಲ್ಲಕ ವಿಚಾರಕ್ಕೆ ಬಡಿದಾಡುವುದಕ್ಕಲ್ಲ. ರಾಜ್ಯದಲ್ಲಿ ಬಿಜೆಪಿ ವಿರುದ್ಧ ಜನಾಕ್ರೋಶ ವ್ಯಕ್ತವಾಗುತ್ತಿರುವ ಈ ಸಂದರ್ಭದಲ್ಲಿ ಹತಾಶೆಗೊಂಡು ವಿರೋಧ ಪಕ್ಷದ ನಾಯಕರನ್ನು ವಿಚಲಿತಗೊಳಿಸಲು ಮುಂದಾಗಿದ್ದು, ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಮಹಬೂಬ್ ಭಾಷಾ ಹೇಳಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

 

Trending

Exit mobile version