ದಿನದ ಸುದ್ದಿ

ಮಂಡ್ಯದಲ್ಲಿ ಶಕ್ತಿ ದೇವತೆ ಮೊರೆ ಹೋದ ಬಿಜೆಪಿ ಕಾರ್ಯಕರ್ತರು

Published

on

ಸುದ್ದಿದಿನ, ಮಂಡ್ಯ :ಬಿ.ಎಸ್.ಯಡಿಯೂರಪ್ಪಗೆ ರಾಜಕೀಯ ಸಂಕಷ್ಟ ಹಿನ್ನೆಲೆ, ಗ್ರಹಗತಿ ಶಾಂತಿಗಾಗಿ ಮಂಡ್ಯದಲ್ಲಿ ಶಕ್ತಿ ದೇವತೆ ಮೊರೆ ಹೋದ ಬಿಜೆಪಿ ಕಾರ್ಯಕರ್ತರು ಇಂದು ಶಕ್ತಿ ದೇವತೆ ಕಾಳಿಕಾಂಬಕ್ಕ ಅಷ್ಟ ದಿಕ್ಕಿಗೆ ತಡೆ ಹೊಡೆದು ಗ್ರಹಗತಿ ಶಾಂತಿಗಾಗಿ‌ ಪ್ರಾರ್ಥಿಸಿದರು.

ಮಂಡ್ಯದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಶಕ್ತಿ ದೇವಾಲಯದಲ್ಲಿ ಗ್ರಹ ಗತಿ ಶಾಂತಿಗಾಗಿ ಶಕ್ತಿ ದೇವತೆ ಕಾಳಿಕಾಂಬ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ವಿಶೇಷ ಪೂಜೆ ಬಳಿಕ ಅಷ್ಟ ದಿಕ್ಕಿನಲ್ಲಿ ತಡೆ ಒಡೆದು ಗ್ರಹಗತಿ ಶಾಂತಿಗಾಗಿ ಪೂಜೆ ಮಾಡಿದರು.

ಹಾಸನದ ವಾಯವ್ಯ ದಿಕ್ಕಿನಲ್ಲಿರುವ ಮೂರು ಗ್ರಹದಿಂದ ಮುಕ್ತಿ ಸಿಗಲೆಂದು ಎಚ್.ಡಿ. ದೇವೇಗೌಡ ಕುಟುಂಬಕ್ಕೆ ಕಾರ್ಯಕರ್ತರಿಂದ ಅಷ್ಟ ದಿಗ್ಬಂಧನ ಹಾಕಿದರು. ಆಡಿಯೋ ಪ್ರಕರಣದಿಂದ ಮುಕ್ತವಾಗಿ ಶ್ರೀಘ್ರ ಮುಖ್ಯಮಂತ್ರಿ ಆಗಲಿ ಎಂದು ಪ್ರಾರ್ಥಿಸಿದರು.

Trending

Exit mobile version