ದಿನದ ಸುದ್ದಿ

ಏ.14ರ ನಂತರ ಮಂಡ್ಯ ಜಿಲ್ಲೆ ಸೀಲ್ ಡೌನ್ ಆಗುತ್ತಂತೆ..? : ಶಾಸಕ ಸುರೇಶ್ ಗೌಡ

Published

on

ಸುದ್ದಿದಿನ,ಮಂಡ್ಯ : ಮಂಡ್ಯ ಜಿಲ್ಲೆಯನ್ನು ಏಪ್ರಿಲ್ 14 ರ ನಂತರ ಲಾಕ್ ಡೌನ್ ಅಲ್ಲ ಸಂಪೂರ್ಣವಾಗಿ ಸೀಲ್ ಡೌನ್ ಮಾಡಲಾಗುತ್ತದೆ ಎಂದು ನಾಗಮಂಗಲ ಶಾಸಕ ಸುರೇಶ್ ಗೌಡ ಮುನ್ಸೂಚನೆಯನ್ನು ನೀಡಿದ್ದಾರೆ.

ತಾಲ್ಲೂಕಿನ ನಿರ್ಗತಿಕರಿಗೆ , ಬಡವರಿಗೆ ಮತ್ತು ಆಹಾರ ಸಾಮಾಗ್ರಿ ಕಿಟ್ ಮತ್ತು ಮಾಸ್ಕ್ ಗಳನ್ನು ಸಾರ್ವಜನಿಕರಿಗೆ ವಿತರಣೆ ಮಾಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯದಲ್ಲಿ ಲಾಕ್ ಡೌನ್ ಸರಿಯಾಗಿ ಪಾಲನೆಯಾಗುತ್ತಿಲ್ಲ ಆಗಾಗಿ ನನಗೆ ತಿಳಿದಿರುವ ಮಟ್ಟಿಗೆ ಏಪ್ರಿಲ್ 14 ರ ನಂತರ ಜಿಲ್ಲೆಯನ್ನು ಸೀಲ್ ಡೌನ್ ಮಾಡಲಾಗುತ್ತದೆ ಎಂಬ ಮಾಹಿತಿ ಬಂದಿದೆ ಎಂದು ಹೇಳಿಕೆಯನ್ನು ನೀಡಿದರು.

ಮನುಷ್ಯನ ಜೀವ ಉಳಿದುಕೊಳ್ಳ ಬೇಕಾದರೆ ಸೀಲ್ ಡೌನ್ ಅವಶ್ಯಕತೆ ಇದೆ ಅದಕ್ಕೆ ಕ್ಷೇತ್ರದ ಎಲ್ಲರ ಸಹಕಾರ ಬೇಕು ಮತ್ತು ಬೇರೆ ದಾರಿ ಯಾವುದು ಇಲ್ಲ ಎಂದು ಅಭಿಪ್ರಾಯಪಟ್ಟರು. ಮತ್ತು ನಮ್ಮ ತಾಲ್ಲೂಕಿನಲ್ಲಿ ಯಾವುದೇ ಕೊರೊನಾ ಸೋಂಕಿತ ವ್ಯಕ್ತಿಗಳು ಇಲ್ಲ ಅನ್ನೋ ನೆಮ್ಮದಿ ಇದ್ದರೂ ಸಹ ಮುಂದೆ ಬರೋದಿಲ್ಲ ಅನ್ನೋದು ಏನು ಗ್ಯಾರಂಟಿ ಅದಕ್ಕೋಸ್ಕರ ಪ್ರತಿಯೊಬ್ಬ ನಾಗರೀಕರು ಸಹ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.

ಹಾಗೂ ನನ್ನ ತಾಲ್ಲೂಕಿನಲ್ಲಿ ಆ ಖಾಯಿಲೆ ಬರದೆ ಇರೋದಕ್ಕೆ ಜನರು ಸಹಕಾರ ಕೊಟ್ಟಿದ್ದಾರೆ ಅನ್ನೋದನ್ನ ಭಾವಿಸುತ್ತೇನೆ ಹಾಗೂ ಮುಂದೆಯೂ ಇದೇರೀತಿ ಪಾಲನೆ ಮಾಡಬೇಕು ಮತ್ತು ಅವರಿಗೆ ಏನೇ ತೊಂದರೆಯಾದರೂ ಅದಕ್ಕೆ ತಾಲ್ಲೂಕಿನಲ್ಲಿ ಜನಪ್ರತಿನಿಧಿಗಳು ಇದ್ದೇವೆ ಮತ್ತು ಮಿನಿ ವಿಧಾನಸೌಧದಲ್ಲಿ ವಾರ್ ರೂಂ ನ್ನು ಸಹ ತೆರೆಯಲಾಗಿದೆ ಆದ್ದರಿಂದ ಸಾರ್ವಜನಿಕರು ಪೋನ್ ಮೂಲಕ ತಮ್ಮ ಸಮಸ್ಯೆ ತಿಳಿಸಿದರೆ ತಕ್ಷಣವೇ ತಾಲ್ಲೂಕು ಆಡಳಿತ ಸ್ಪಂದಿಸುತ್ತದೆ ಎಂದು ತಿಳಿಸಿದರು.

ಹಾಗೂ ತಾಲೂಕಿನ ಅಧಿಕಾರಿಗಳು ರೋಗ ಹರಡದಂತೆ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ ಮತ್ತು ಹೋಂ ಕ್ಟಾರೆಂಟೈನ್ ನಲ್ಲಿ ಇರುವ ವ್ಯಕ್ತಿಗಳ ಜೊತೆ ಸಂಪರ್ಕ ಮಾಡುತ್ತಿರುವ ಫ್ರಂಟ್ ಲೈನ್ ಅಧಿಕಾರಿಗಳಿಗೆ 6000 ಮಾಸ್ಕ್ ಗಳನ್ನು ನೀಡಲಾಗುತ್ತಿದೆ ಎಂದರು.

ರೈತರು ಬೆಳೆದಿರುವ ತರಕಾರಿ, ಹಣ್ಣುಗಳನ್ನು ಜನಪ್ರತಿನಿಧಿಗಳು ತಮ್ಮ ಸ್ವಂತ ಹಣದಲ್ಲಿ ಖರೀದಿ ಮಾಡಿ ಸಾರ್ವಜನಿಕರಿಗೆ ಉಚಿತವಾಗಿ ನೀಡಲಾಗುತ್ತದೆ ಎಂದರು.

ಇದೇ ವೇಳೆ ವಿಧಾನ ಪರಿಷತ್ ಸದಸ್ಯ ಅಪ್ಪಾಜಿಗೌಡ , ತಹಶೀಲ್ದಾರ್ ಕುಂಞ ಅಹಮದ್ , ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಧನಂಜಯ , ಮುಖ್ಯಾಧಿಕಾರಿ ಕೃಷ್ಣ ಪ್ರಸಾದ್ , ಪಿಎಸ್ಐ ರವಿ ಕಿರಣ್ ಇತರರು ಹಾಜರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version