ದಿನದ ಸುದ್ದಿ
ಮಂಡ್ಯ | ನಾಮಪತ್ರ ಪರಿಶೀಲನೆ, ಎರಡು ನಾಮಪತ್ರ ತಿರಸ್ಕೃತ
ಸುದ್ದಿದಿನ, ಮಂಡ್ಯ: ಮಂಡ್ಯ ಲೋಕಸಭಾ ಸಾರ್ವತ್ರಿಕ ಚುನಾವಣೆ-2019 ಸಂಬಂಧಿಸಿದಂತೆ ಚುನಾವಣೆಗೆ ಸ್ಪರ್ಧಿಸಲು ಉಮೇದುವಾರಿಕೆ ಸಲ್ಲಿಸಿದ್ದ ಅಭ್ಯರ್ಥಿಗಳ ನಾಮಪತ್ರಗಳ ಪರಿಶೀಲನೆ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಇಂದು ನಡೆದಿದ್ದು, ಎರಡು ನಾಮಪತ್ರಗಳು ತಿರಸ್ಕøತಗೊಂಡಿವೆ ಎಂದು ಮಂಡ್ಯ ಜಿಲ್ಲಾ ಚುನಾವಣಾಧಿಕಾರಿಗಳಾದ ಎನ್.ಮಂಜುಶ್ರೀ ಅವರು ತಿಳಿಸಿದರು.
ಚುನಾವಣೆಗೆ ಸ್ಪರ್ಧಿಸಲು 27 ಅಭ್ಯರ್ಥಿಗಳು ಒಟ್ಟು 37 ಉಮೇದುವಾರಿಕೆ ಸಲ್ಲಿಸಿದ್ದು, ಈ ಪೈಕಿ 26 ಅಭ್ಯರ್ಥಿಗಳ ನಾಮಪತ್ರ ಕ್ರಮಬದ್ಧವಾಗಿದೆ. ಐರಾ ನ್ಯಾಷನಲ್ ಪಾರ್ಟಿಯಿಂದ 2 ನಾಮಪತ್ರ ಸಲ್ಲಿಸಿದ್ದ ಡಿ.ಸಿ ಜಯಶಂಕರ್ ಅವರ ಒಂದು ನಾಮಪತ್ರ ತಿರಸ್ಕøತವಾಗಿದ್ದು, ಪಕ್ಷೇತರ ಅಭ್ಯರ್ಥಿಯಾಗಿ 1 ನಾಮಪತ್ರ ಸಲ್ಲಿಸಿರುವ ಶಂಭುಲಿಂಗೇಗೌಡ ಅವರ ನಾಮಪತ್ರ ತಿರಸ್ಕøತವಾಗಿದೆ.
ನಾಮಪತ್ರ ಪರಿಶೀಲನೆಯ ನಂತರ 26 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿ ಇದ್ದು, ಮಾರ್ಚ್ 29 ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿರುತ್ತದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401