ದಿನದ ಸುದ್ದಿ

ಮುಂಗಾರು ಹಂಗಾಮಿಗೆ ಅವಶ್ಯಕತೆಗಿಂತ ಹೆಚ್ಚಿನ ಪ್ರಮಾಣದ ರಸಗೊಬ್ಬರ ಸಂಗ್ರಹ : ಸಚಿವ ಮನ್ಸುಖ್ ಮಾಂಡವೀಯ

Published

on

ಸುದ್ದಿದಿನ ಡೆಸ್ಕ್ : ದೇಶದಲ್ಲಿನ ರಸಗೊಬ್ಬರ ಸಂಗ್ರಹದ ಪರಿಸ್ಥಿತಿ ಪರಾಮರ್ಶಿಸಲು ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಾ.ಮನ್ಸುಖ್ ಮಾಂಡವೀಯ ಮತ್ತು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಕೃಷಿ ಸಚಿವರ ಸಭೆ ನಡೆಸಿದರು.

ದೇಶದಲ್ಲಿನ ರಸಗೊಬ್ಬರದ ಸಂಗ್ರಹ ಮುಂಗಾರು ಹಂಗಾಮಿನ ಅವಶ್ಯಕತೆಗಿಂತ ಹೆಚ್ಚಿದೆ ಎಂದು ಮನ್ಸುಖ್ ಮಾಂಡವೀಯ ಹೇಳಿದರು.

ಡಿಎಪಿಗೆ ಈ ಹಿಂದೆ ನೀಡುತ್ತಿದ್ದ 1ಸಾವಿರದ 650ರೂಪಾಯಿ ಸಬ್ಸಿಡಿ ಬದಲಿಗೆ ಈ ವರ್ಷದಿಂದ ಎರಡು ಸಾವಿರದ 501ರೂಪಾಯಿ ನೀಡಲು ಸರ್ಕಾರ ನಿರ್ಧರಿಸಿದೆ ಎಂದು ಸಚಿವರು ಹೇಳಿದ್ದಾರೆ.

ಇದು ಶೇ.50ರಷ್ಟು ಹೆಚ್ಚುವರಿ ಸಬ್ಸಿಡಿಯಾಗಿದೆ. ರೈತರನ್ನು ಅನಾವಶ್ಯಕವಾಗಿ ಚಿಂತೆಗೀಡುಮಾಡುವ ಬದಲು ರಾಜ್ಯಗಳು ರಸಗೊಬ್ಬರದ ನೈಜಸ್ಥಿತಿಯನ್ನು ತಿಳಿಸಬೇಕು. ಜೊತೆಗೆ ಕಾಳಸಂತೆಯಲ್ಲಿನ ಮಾರಾಟ, ಅಕ್ರಮ ಸಾಗಣೆ, ಸಂಗ್ರಹವನ್ನು ತಡೆಗಟ್ಟಬೇಕು ಎಂದು ಮಾಂಡವೀಯ ಹೇಳಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version