ಸಿನಿ ಸುದ್ದಿ
#Me_too | ನಿರ್ದೇಶಕ ರವಿ ಶ್ರೀವತ್ಸ ಮೇಲೆ ನಟಿ ಸಂಜನಾ ಆರೋಪ..!
ಸುದ್ದಿದಿನ ಡೆಸ್ಕ್ | ನಟಿ ಸಂಜನಾ ಗಲ್ರಾನಿ #Me Too ಅಭಿಯಾನದಡಿ ತನಗಾದ ಲೈಂಗಿಕ ಕಿರುಕುಳದ ಬಗ್ಗೆ ಬಾಯ್ಬಿಟ್ಟಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಈ ಮೀಟು ಅಭಿಯಾನ ಸಾಮಾಜಿಕ ಜಾಲತಾಣಗಳಲ್ಲಿ ಬಹುಚರ್ಚಿತ ವಿಷಯವಾಗಿ ಬಿಟ್ಟಿದೆ. ಕೇಂದ್ರದ ಸಚಿವರೊಬ್ಬರು ಇದೇ ಕಾರಣಕ್ಕೆ ರಾಜೀನಾಮೆಯನ್ನು ಕೂಡ ಕೊಟ್ಟಿದ್ದಾರೆ.
ಅಂದಹಾಗೆ ಸಂಜನಾ ಅವರು ಕನ್ನಡದಲ್ಲಿ ನಟಿಸಿದ ಮೊದಲ ಸಿನೆಮಾ ‘ಗಂಡ ಹೆಂಡತಿ’ ಸಿನೆಮಾದ ನಿರ್ದೇಶಕ ರವಿ ಶ್ರೀವತ್ಸ ಅವರ ಮೇಲೆ ಆರೋಪ ಹೊರಿಸಿದ್ದಾರೆ. ಅದೇನು ಅಂದ್ರೆ, “ಸಿನೆಮಾ ಶೂಟಿಂಗ್ ಸಮಯದಲ್ಲಿ ಲಿಪ್ ಲಾಕ್ ಅಥವಾ ಕಿಸ್ಸಿಂಗ್ ಸೀನ್ ಒಂದೇ ಇರುತ್ತೆ ಅಂತ ಹೇಳಿದ ನಿರ್ದೇಶಕ ರವಿ ಅವರು ಸುಮಾರು 50 ಕಿಸ್ ಸೀನ್ ಗಳನ್ನ ಚಿತ್ರ ವಿಚಿತ್ರವಾಗಿ ಚಿತ್ರೀಕರಿಸಿ ಕೊಂಡರು ಇಡೀ ಸಿನೆಮಾದಲ್ಲಿ ನನ್ನನ್ನು ಯಾವ್ ಯಾವ್ದೋ ಆಂಗಲ್ ನಲ್ಲಿ ನನ್ನ ಶೂಟ್ ಮಾಡಿದ್ರು. ಸೆನ್ಸಾರ್ ನವರು ತುಂಬಾ ದೃಶ್ಯಗಳನ್ನು ಕಟ್ ಮಾಡಿದ್ದಾರೆ. ಆದರೆ ಉಳಿದ ದೃಶ್ಯಗಳು ತುಂಬಾ ಇದಾವೆ” ಎಂದಿದ್ದಾರೆ.
ಹಾಗೆ ನನಗೆ ಆ ಸಿನೆಮಾ ಮಾಡುವಾಗ ಕೇವಲ ಹದಿನಾರುವರ್ಷ. ಹಾಗಾಗಿ ಯಾವುದೇ ರೀತಿಯ ಪ್ರತಿರೋಧವನ್ನೊಡ್ಡಲು ಆಗ ನನಗೆ ಆಗಲಿಲ್ಲ. ಆದರೆ ಈ #Me Too ಅಭಿಯಾನ ನನ್ನಲ್ಲಿ ಧೈರ್ಯ ತುಂಬಿದ್ದರಿಂದ ನಾನು ಈ ವಿಷಯವನ್ನು ಮಾಧ್ಯಮಗಳ ಮುಂದೆ ಹಂಚಿಕೊಳ್ಳಲು ಸಾಧ್ಯವಾಯಿತು ಎಂದಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401