ದಿನದ ಸುದ್ದಿ
ದೇವರ ಎತ್ತುಗಳಿಗೆ ಮೇವು ಸಂಗ್ರಹ ಅಭಿಯಾನ
ಸುದ್ದಿದಿನ, ಮೊಣಕಾಲ್ಮೂರು : ನಾಯಕ ಪಂಗಡದ ಮ್ಯಾಸ ನಾಯಕ ಬುಡಕಟ್ಟು ಜನಾಂಗದ ದೇವರ ಎತ್ತುಗಳಿಗೆ ಮೇವು ಸಂಗ್ರಹ ಅಭಿಯಾನದ ಅಂಗವಾಗಿ ಶುಕ್ರವಾರ ಮೊಳಕಾಲ್ಮೂರು ತಾಲ್ಲೂಕು ಕಂಪಳದೇವರಹಟ್ಟಿಯ ಶ್ರೀ ಕಂಪಳದೇವರ ಎತ್ತುಗಳಿಗೆ ನೀಡಲಾಯಿತು.
ಮ್ಯಾಸ ಬೇಡ(ಮ್ಯಾಸ ನಾಯಕ) ಬುಡಕಟ್ಟು ಸಂಸ್ಕೃತಿ ಸಂರಕ್ಷಣಾ ಸಮಿತಿ(ರಿ) ವತಿಯಿಂದ “ದೇವರ ಎತ್ತುಗಳಿಗೆ ಮೇವು ಸಂಗ್ರಹ ಅಭಿಯಾನ“ ನಮ್ಮ ಪೂರ್ವಜರ ಪ್ರತೀಕವಾಗಿರುವ ದೇವರ ಎತ್ತುಗಳನ್ನು ಉಳಿಸಿಕೊಳ್ಳೂಣʼʼಒಂದು ಹೊರೆ ಮೇವು ನೀಡಿʼ ಎಂದು ಮ್ಯಾಸ ನಾಯಕ ಬುಡಕಟ್ಟು ಜನರು ಮತ್ತು ಮುಖ್ಯವಾಹಿನಿಯ ಎಲ್ಲಾ ಸಾರ್ವಜನಿಕರಿಂದ ಮೇವು ಸಂಗ್ರಹ ಅಭಿಯಾನವನ್ನು ಹಮ್ಮಿಕೊಂಡಿರುತ್ತೇವೆ.
ಅಭಿಯಾನದ ಭಾಗವಾಗಿ ಇಂದು ದಾವಣಗೆರೆ ನಗರ ವಾಸಿಯಾದ ಮಳಿಲೆರು ಬೆಡಗಿನ ಶ್ರೀ ಕಾರ್ತಿಕ್ ತಂದೆ ಚಂದ್ರಶೇಖರವರ ಅಜ್ಜಿಯಾದ ದಿವಂಗತ ಶ್ರೀಮತಿ ಜಯಲಕ್ಷ್ಮಮ್ಮರವರ ಆತ್ಮ ಶಾಂತಿಗಾಗಿ ಮೊಳಕಾಲ್ಮೂರು ತಾಲ್ಲೂಕು ಕಂಪಳದೇವರಹಟ್ಟಿಯ ಶ್ರೀ ಕಂಪಳ ದೇವರ ಎತ್ತುಗಳಿಗೆ ಒಂದು ಲೋಡ್ ಮೇವು ನೀಡಿ ಭಕ್ತಿಯನ್ನು ಸಮರ್ಪಿಸಿದರು.
ಮ್ಯಾಸ ಮಂಡಲದ ಸಮಸ್ತ ನೆಂಟರು ಬಂಟರು ಹಾಗೂ ಸರ್ವ ಸಾರ್ವಜನಿಕರು ಈ ಒಂದು ಮೇವು ಸಂಗ್ರಹ ಅಭಿಯಾನದಲ್ಲಿ ಭಾಗವಹಿಸಿ ಪ್ರತಿಯೊಬ್ಬರು ತಮ್ಮ ತಮ್ಮ ಗ್ರಾಮದಲ್ಲಿ ಮೇವು ಸಂಗ್ರಹಿಸಿ ಮ್ಯಾಸ ಮಂಡಲದ ಎಲ್ಲಾ ಗುಡಿಕಟ್ಟೆಯ ದೇವರ ಎತ್ತುಗಳಿಗೆ ನೀಡಿ, ನಮ್ಮ ಬುಡಕಟ್ಟು ಸಂಸ್ಕೃತಿಯ ದೇವರ ಎತ್ತುಗಳ ಉಳಿವಿಗಾಗಿ ಈ ಒಂದು ಮೇವು ಸಂಗ್ರಹ ಅಭಿಯಾನದಲ್ಲಿ ಎಲ್ಲರೂ ಭಾಗವಹಿಸಿ ಬುಡಕಟ್ಟು ದೇವರ ಕೃಪೆಗೆ ಪಾತ್ರರಾಗಬೇಕು ಎಂದು ಕೋರಿದೆ.
ಈ ಸಂದರ್ಭದಲ್ಲಿ ಮ್ಯಾಸ ನಾಯಕ ಬುಡಕಟ್ಟು ಸಂಸ್ಕೃತಿ ಸಂರಕ್ಷಣಾ ಸಮಿತಿಯ ಸಂಚಾಲಕರಾದ ಕೆ.ಬಿ.ಓಬಣ್ಣ, ಗೋಸಲು ಪಾಲಯ್ಯ, ದಳಪತಿ ತೀಪ್ಪೆಸ್ವಾಮಿ,ಕುಂಟು ಮೂಗಯ್ಯ,ಮಹೇಶ.ಬಿ.ಎಸ್,ಚಿಂತಗುಟ್ಲ ಬೋರಯ್ಯ, ಗೋವಿಂದಪ್ಪ ಸಿ ಎಸ್ ,ಕೃಷ್ಣ, ಪ್ರಹ್ಲಾದ್, ತಮ್ಮಯ್ಯ ಹುಡೆಗೊಳ, ಮಹೇಶ ಡಿ.ಸಿ ಇತರರು ಇದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243