ದಿನದ ಸುದ್ದಿ
ಸೋನೆ ಮಳೆಯಲ್ಲಿ ಐಸ್‍ಕ್ರೀಂ ಸವಿದ ಸಚಿವ ಡಿಕೆಶಿ
ಸುದ್ದಿದಿನ ಡೆಸ್ಕ್: ಸದಾ ಬ್ಯುಸಿಯಾಗಿರುವ ಸಚಿವ ಡಿಕೆ ಶಿವಕುಮಾರ್ ಅವರು ಬುಧವಾರ ಸುರಿಯುವ ಮಳೆ ಮಧ್ಯೆಯೂ ಐಸ್‍ಕ್ರೀಂ ಸವಿದು ಗಮನ ಸೆಳೆದರು.
ಬೆಂಗಳೂರಿನ ಕೋರಮಂಗಲದಲ್ಲಿ ಹೊಸದಾಗಿ ಆರಂಭವಾದ ಕಲ್ಲುಕ್ಕಿ ರೆಸ್ಟೋರಂಟ್‍ಅನ್ನು ಉದ್ಘಾಟಿಸಿದ ಸಚಿವರು ಐಸ್‍ಕ್ರೀಂ ಸವಿದು ಶಹಬ್ಬಾಶ್‍ಗಿರಿ ಕೊಟ್ಟರು. ತಿನ್ನಲು ಮತ್ತು ಭೇಟಿ ಮಾಡಲು ಈ ಸ್ಥಳ ಚೆನ್ನಾಗಿದೆ ಎಂದರು. “ಕುಲ್ಲುಕ್ಕಿ” ದಕ್ಷಿಣ ಭಾರತದಲ್ಲಿ ನಿರ್ಮಾಣ ಸಾಮಗ್ರಿಗಳನ್ನು ವಿತರಿಸುವ ಎಂ ಎನ್ ಹೆಚ್ ಸಂಸ್ಥೆಯ ಪೋಷಕ ಅಂಗವಾಗಿದೆ. ಪಾನೀಯ ಮತ್ತು ಬರ್ಗರ್ ರುಚಿಸಿದ ನಂತರ ಡಿಕೆಎಸ್ ಅವರು ಮಾಧ್ಯಮಕ್ಕೆ ಉತ್ತರಿಸುತ್ತಾ, ಮಸಾಲೆಯುಕ್ತ ಕಿಕ್ ಹೊಂದಿರುವ ಪಾನೀಯ ವಿಭಿನ್ನವಾಗಿದೆ ಎಂದರು. ಕುಲ್ಲುಕಿ ಬ್ರಾಂಡ್ ಐಸ್ ಕ್ರೀಮ್ ಮತ್ತು ಜ್ಯೂಸ್ ಸೇವಿಸಿ ಶ್ಲಾಘಿಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಸಿಇಒ, ಮೊಯಿದ್ದೀನ್ ಹಾಗೂ ಸಿಎಫ್ ಒ, ನೌಷಾದ್ ಉಪಸ್ಥಿತರಿದ್ದರು.